Bengaluru, ಏಪ್ರಿಲ್ 14 -- Actor Bank Janardhan Death: ಸ್ಯಾಂಡಲ್‌ವುಡ್‌ ಕಂಡ ಖ್ಯಾತ ಹಾಸ್ಯ ನಟ ಬ್ಯಾಂಕ್‌ ಜನಾರ್ದನ್ ತಮ್ಮ 79ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ವಯಸ್ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬ್ಯಾಂಕ್‌ ಜನಾರ್ದನ್‌ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ, ಇಂದು (ಏಪ್ರಿಲ್‌ 14) ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ಸಣ್ಣ ಸಣ್ಣ ಪಾತ್ರಗಳ ಮೂಲಕ ಬಣ್ಣದ ಲೋಕಕ್ಕೆ ಬಂದ ಈ ನಟ, ಕಾಮಿಡಿ ಮ್ಯಾನರಿಸಂನಿಂದಲೇ ಹೆಚ್ಚು ಮೆಚ್ಚುಗೆ ಗಿಟ್ಟಿಸಿಕೊಂಡರು. ಪೋಷಕ ಪಾತ್ರಗಳಿಗೂ ಜೀವ ತುಂಬಿದರು. ವಿಪರ್ಯಾಸ ಏನೆಂದರೆ, 800ಕ್ಕೂ ಹೆಚ್ಚು ಸಿನಿಮಾ ಮಾಡಿದರೂ ಅವರ ಆಸೆ ಮಾತ್ರ ಈಡೇರಲೇ ಇಲ್ಲ!

ಬ್ಯಾಂಕ್‌ ಜನಾರ್ದನ್ ಎಂದರೆ ಹಾಸ್ಯಕ್ಕಷ್ಟೇ ಸೀಮಿತ ಅನ್ನೋ ವಿಶೇಷಣದೊಂದಿಗೆ ಗುರುತಿಸಿಕೊಂಡರು. ಬೋಳು ತಲೆ, ಹೊಟ್ಟೆಯ ಮೂಲಕವೇ ಕಾಮಿಡಿಗೆ ಹೇಳಿ ಮಾಡಿಸಿದ ನಟ ಎಂದೂ ಕರೆಸಿಕೊಂಡರು. ಅದರಂತೆ ಸಾಲು ಸಾಲು ಕಾಮಿಡಿ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ...