Bengaluru, ಮೇ 7 -- ಚಕ್ರವರ್ತಿ ಚಂದ್ರಚೂಡ್‍ ನಿರ್ದೇಶನದ ಚಿತ್ರವೊಂದರಲ್ಲಿ ರಾಜವರ್ಧನ್‍ ನಟಿಸುತ್ತಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆಯೇ ಕೇಳಿಬಂದಿತ್ತು. ಸೋಮವಾರ ಮಧ್ಯಾಹ್ನ, ನಿರ್ಮಾಣ ಸಂಸ್ಥೆ ಮತ್ತು ಚಿತ್ರದ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಚಿತ್ರಕ್ಕೆ 'ಜಾವ' ಎಂಬ ಹೆಸರನ್ನು ಇಡಲಾಗಿದ್ದು, ಈ ಚಿತ್ರವನ್ನು ಬಾರ್ನ್ ಸ್ವಾಲೋ ಕಂಪನಿ ನಿರ್ಮಿಸುತ್ತಿದೆ.

ವಿಶೇಷವೆಂದರೆ, ಈ ಚಿತ್ರದ ಮೂಲಕ ರಾಜವರ್ಧನ್‍ ನಿರ್ಮಾಪಕರಾಗಿದ್ದಾರೆ. ಬಾರ್ನ್ ಸ್ವಾಲೋ ಕಂಪನಿ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ, ಅದರಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಕುರಿತು ಮಾತನಾಡುವ ಅವರು, 'ನಟನೆ ಜೊತೆಗೆ ಬೇರೆ ಏನಾದರೂ ಮಾಡಬೇಕು ಎಂಬ ಆಸೆಯಿಂದ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದೇನೆ. ಸಮಾನಮನಸ್ಕ ಸ್ನೇಹಿತರೊಂದಿಗೆ ಸೇರಿ ಒಂದಿಷ್ಟು ಚಿತ್ರಗಳನ್ನು ನಿರ್ಮಿಸುವ ಆಸೆ ಇದೆ" ಎಂದಿದ್ದಾರೆ.

ಮುಂದುವರಿದು ಮಾತನಾಡುವ ಅವರು, "ಈಗಾಗಲೇ ನಮ್ಮ ಬಳಿ ನಾಲ್ಕು ಕಥೆಗಳಿವೆ. ಅದರಲ್ಲಿ ಇದೂ ಒಂದು. ಚಕ್ರವರ್ತಿ ಅವರ ಜೊತೆಗೆ ಐದಾರು ವರ...