ಭಾರತ, ಮೇ 27 -- ಜಂಟಲ್​​ಮನ್ ಗೇಮ್ ಕ್ರಿಕೆಟ್​ನಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಸಂಬಂಧಿಸಿ ಹತ್ತಾರು ಉದಾಹರಣೆಗಳನ್ನು ನೋಡಿದ್ದೇವೆ. ಇತ್ತೀಚೆಗೆ ತಂಡದ ಎಲ್ಲಾ 10 ಬ್ಯಾಟರ್ಸ್​ ರಿಟೈರ್ಡ್​ ಔಟ್ ಆಗಿದ್ದೂ ಕ್ರಿಕೆಟ್​ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿತು. ಹೀಗೆ... ಒಂದಾ... ಎರಡಾ.. ಅದೆಷ್ಟೋ... ಅದೇ ರೀತಿ ಮತ್ತೊಂದು ಅಚ್ಚರಿಯ ಫಲಿತಾಂಶ ಬಂದಿದೆ. ಇದು ವಿಚಿತ್ರ ಫಲಿತಾಂಶವೂ ಹೌದು! ನಿಮಗಿದು ಗೊತ್ತಾ ತಂಡವೊಂದು ಕೇವಲ 2 ರನ್​ಗೆ ಆಲೌಟ್​ ಆಗಿದೆ. ಅದರಲ್ಲಿ ಒಂದು ರನ್ ವೈಡ್ ಮೂಲಕ ಬಂದಿರೋದು!!

ಇಂತಹ ಒಂದು ಅಚ್ಚರಿ ಫಲಿತಾಂಶ ಬಂದಿರೋದು ಮಿಡ್ಲ್‌ಸೆಕ್ಸ್ ಕೌಂಟಿ ಕ್ರಿಕೆಟ್ ಲೀಗ್‌ನಲ್ಲಿ. ನಾರ್ತ್ ಲಂಡನ್ ಸಿಸಿ ಥರ್ಡ್ XI vs ರಿಚ್ಮಂಡ್ ಸಿಸಿ ಫೋರ್ಥ್ XI ನಡುವಿನ ಪಂದ್ಯದಲ್ಲಿ ನಡೆದಿದೆ. ಕ್ರಿಕೆಟ್ ಇತಿಹಾಸದಲ್ಲೇ ದಾಖಲಾದ ಅತಿ ಕಡಿಮೆ ಮೊತ್ತ ಇದು. ಈ ಪಂದ್ಯದಲ್ಲಿ 8 ಬ್ಯಾಟ್ಸ್​​ಮನ್​ಗಳು ಡಕೌಟ್​ ಆಗಿರುವುದು ಮತ್ತೊಂದು ಅಚ್ಚರಿ. ಅದು 5.4 ಓವರ್​​​​ಗಳಲ್ಲಿ ರಿಚ್ಮಂಡ್ ತಂಡವು 2 ರನ್​ಗೆ ಆಲೌಟ್​ ಆಯಿತು....