ಭಾರತ, ಏಪ್ರಿಲ್ 15 -- ಆಂದ್ರಪ್ರದೇಶ: ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಪ್ರೀತಿಸಿ ಮದುವೆಯಾದರೂ ಪತಿಯೇ ತನ್ನ ಪತ್ನಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿರುವುದಷ್ಟೇ ಅಲ್ಲದೇ ತಾನೇ ಕೊಲೆ ಮಾಡಿರುವುದು ಎಂದು ಒಪ್ಪಿಕೊಂಡಿದ್ದಾನೆ. ಪತ್ನಿ ಜತೆಗೆ ಇನ್ನೂ ಒಂದು ಜೀವದ ಬಲಿ ತೆಗೆದುಕೊಂಡಿದ್ದಾನೆ. ಯಾಕೆಂದರೆ ಆತನ ಪತ್ನಿ 8 ತಿಂಗಳ ಗರ್ಭಿಣಿಯಾಗಿದ್ದಳು ಎಂದು ವರದಿಯಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಪೊಲೀಸರ ಪ್ರಕಾರ ಮಹಿಳೆಯನ್ನು 27 ವರ್ಷದ ಅನುಷಾ ಎಂದು ಗುರುತಿಸಲಾಗಿದ್ದು, ಆರೋಪಿ ಜ್ಞಾನೇಶ್ವರ್ ಸೋಮವಾರ ಬೆಳಿಗ್ಗೆ ತನ್ನ ಪತ್ನಿ ಅನುಷಾ ಜತೆ ಜಗಳವಾಡಿದ್ದ. ನಂತರ ಆ ವ್ಯಕ್ತಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆಕೆ ಪ್ರಜ್ಞಾಹೀನಳಾಗಿದ್ದಾಳೆ ಎಂದು ತಿಳಿದಾಗ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಅಷ್ಟು ಹೊತ್ತಿಗಾಗಲೇ ಅವಳು ಕೊನೆಯುಸಿರೆಳೆದಿದ್ದಳು ಎಂದು ವರದ...