ಭಾರತ, ಫೆಬ್ರವರಿ 16 -- ಕರ್ನಾಟಕದ ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುವ ಸುಂದರ ಊರು ಚಿಕ್ಕಮಗಳೂರು. ಇಲ್ಲಿನ ಪ್ರಸಿದ್ಧ ದೇವಾಲಯ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ. ಇದು ಕರ್ನಾಟಕದಲ್ಲಿರುವ ಪ್ರಸಿದ್ಧ ದೇವಿ ದೇವಾಲಯವೂ ಹೌದು. ಕಾಶಿಯಲ್ಲಿ ಕೂಡ ಅನ್ನಪೂರ್ಣೆಯ ದೇವಾಲಯವಿದೆ. ಬೆಳ್ಳಿ ಸಿಂಹಾಸನದಲ್ಲಿ ಇರುವ ಅನ್ನಪೂರ್ಣೆಯ ವಿಗ್ರಹವನ್ನು ಕಾಶಿಯಲ್ಲಿ ಕಾಣಬಹುದು. ಅನ್ನಪೂರ್ಣೆಯು ಶಿವನ ಕಪಾಲವನ್ನು ತುಂಬಿಸಿದವಳು ಎಂಬ ಖ್ಯಾತಿಯನ್ನು ಪಡೆದಿದ್ದಾಳೆ.

ತೇತ್ರಾಯುಗದಲ್ಲಿ ದಂಡಕಾರಣ್ಯದಲ್ಲಿ ಅಗಸ್ತ್ಯ ಮಹಾಮುನಿಗಳ ಆಶ್ರಮವಿರುತ್ತದೆ. ವನವಿಹಾರಕ್ಕಾಗಿ ಬಂದ ಶ್ರೀರಾಮಚಂದ್ರ ತನ್ನ ಕುಟುಂಬದವರ ಜೊತೆ ಅಗಸ್ತ್ಯ ಮುನಿಗಳ ಆಶ್ರಮಕ್ಕೆ ಬರುತ್ತಾನೆ. ರಾಜಪರಿವಾರದ ಉಪಚಾರಕ್ಕಾಗಿ ಅನುಗ್ರಹವನ್ನು ಬೇಡಿ ಅಗಸ್ತ್ಯರು ಅನ್ನಪೂರ್ಣೇಶ್ವರಿಯನ್ನು ಪೂಜಿಸುತ್ತಾರೆ. ಇವರ ಭಕ್ತಿಗೆ ಮೆಚ್ಚಿ ಶ್ರೀ ಅನ್ನಪೂರ್ಣೇಶ್ವರಿಯು ಪ್ರತ್ಯಕ್ಷಳಾಗಿ ಅಗಸ್ತ್ಯರಿಗೆ ಅಕ್ಷಯಪಾತ್ರೆಯೊಂದನ್ನು ನೀಡುತ್ತಾರೆ. ಅಗಸ್ತ್ಯ ಮುನಿಗಳ ಪತ್ನಿಯ ಹೆಸರು ಲೋಪಾಮುದ್ರೆ. ಲೋಪಾ...