Kolkata, ಏಪ್ರಿಲ್ 18 -- ಕೋಲ್ಕತದ ನ್ಯೂಟೌನ್‌ನಲ್ಲಿರುವ ಬಿಜೆಪಿ ನಾಯಕ ದಿಲೀಪ್ ಘೋಷ್ ಮನೆಯಲ್ಲಿ ಇಂದು ಸಂಭ್ರಮ, ಸಡಗರ. 61ರ ವಯಸ್ಸಿನಲ್ಲಿ ದಿಲೀಪ್ ಘೋಷ್ ಮದುವೆಯಾಗುತ್ತಿರುವುದು ಅದಕ್ಕೆ ಕಾರಣ. ಹಾಗಾಗಿ, ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ - ರಿಂಕು ಮಜುಂದಾರ್ ವಿವಾಹ ಸದ್ಯ ಕುತೂಹಲದ ಕೇಂದ್ರ ಬಿಂದು.

ಘೋಷ್ ಅವರ ಮನೆಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಮದುವೆಗೆ ತಯಾರಿ ನಡೆದಿತ್ತು,. ಶುಕ್ರವಾರ ಬೆಳಿಗ್ಗೆ ದಿಲೀಪ್ ಘೋಷ್ ಅವರು ರಿಂಕು ಮಜುಂದಾರ್ ಅವರನ್ನು ವಿವಾಹವಾದರು. ಬಿಜೆಪಿ ರಾಜ್ಯ ಅಧ್ಯಕ್ಷ ಸುಕಾಂತ ಮಜುಂದಾರ್‌ ಮತ್ತು ಮಂಗಲ್ ಪಾಂಡೆ, ಸತೀಶ್ ಧವನ್, ಸುನಿಲ್ ಬನ್ಸಾಲ್, ಸಮಿಕ್ ಭಟ್ಟಾಚಾರ್ಯ, ಲಾಕೆಟ್ ಚಟರ್ಜಿ ಸೇರಿ ಇತರೆ ನಾಯಕರು ಘೋಷ್ ಅವರ ನಿವಾಸಕ್ಕೆ ತೆರಳಿ ಶುಭಕೋರಿದರು.

ದಿಲೀಪ್ ಘೋಷ್ ಅವರ ಮನೆಯಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನೆರವೇರಿತು. ಕೆಲವೇ ಕೆಲವು ಆಪ್ತರನ್ನಷ್ಟೇ ಅವರು ಆಹ್ವಾನಿಸಿದ್ದರು. ದಿಲೀಪ್ ಘೋಷ್ ಅವರ ತಾಯಿ ಗೋಪಿವಲ್ಲಭಪುರದಿಂದ ಈ ಮದುವೆಗಾಗಿ ಆಗಮಿಸಿದ್ದರು ಎಂದು...