ಭಾರತ, ಏಪ್ರಿಲ್ 29 -- ತಮಿಳು ಹುಡುಗಿ ಶ್ರಾವಣಿ ಹಾಗೂ ಕನ್ನಡದ ಹುಡುಗ ಸೂರ್ಯ, ಸೂರ್ಯನ ಮಗಳು ದೀಕ್ಷಾ. ದೀಕ್ಷಾಗಾಗಿ ಒಂದಾಗುವ ಶ್ರಾವಣಿ-ಸೂರ್ಯ ಈ ಕಥೆ ನಿಮಗೂ ತಿಳಿದಿರಬಹುದು. ಇದು 2017ರಲ್ಲಿ ಪ್ರಸಾರವಾದ ಅವನು ಮತ್ತೆ ಶ್ರಾವಣಿ ಧಾರಾವಾಹಿಯ ಕಥೆ. ರವಿ ಆರ್. ಗರಣಿ ನಿರ್ದೇಶನದ ಈ ಧಾರಾವಾಹಿ ಆ ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು. ಈ ಧಾರಾವಾಹಿಯಲ್ಲಿ ನಟಿಸಿರುವ ಕಲಾವಿದರೂ ತೆರೆ ಮೇಲೆ ಮಾತ್ರವಲ್ಲ ತೆರೆಯ ಹಿಂದೆಯೂ ಅದ್ಭುತವಾದ ಬಾಂಧವ್ಯ ಹೊಂದಿದ್ದಾರೆ.
ಅವನು ಮತ್ತೆ ಶ್ರಾವಣಿ ಧಾರಾವಾಹಿಯಲ್ಲಿ ಒಟ್ಟಾಗಿ ತೆರೆ ಹಂಚಿಕೊಂಡಿರುವ ಕಲಾವಿದರು ಈಗಲೂ ಒಳ್ಳೆಯ ಸ್ನೇಹಿತರಂತೆ ಇದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಈ ಧಾರಾವಾಹಿ ತಂಡದ ಪುನರ್ಮಿಲನವಾಗಿತ್ತು. ಬಹುತೇಕ ಎಲ್ಲಾ ನಟ-ನಟಿಯರು ಜೊತೆಯಾಗಿ ಸೇರಿದ್ದರು.
ಕಳೆದ ವರ್ಷವು ಈ ಧಾರಾವಾಹಿ ತಂಡದವರು ಭೇಟಿಯಾಗಿದ್ದರು. ಇದೀಗ ಈ ವರ್ಷ ಮತ್ತೆ ಒಂದಾಗಿದ್ದಾರೆ ಅವನು ಮತ್ತೆ ಶ್ರಾವಣಿ ಧಾರಾವಾಹಿ ತಂಡದ ಸದಸ್ಯರು. ಆದರೆ ಈ ಬಾರಿ ಎಲ್ಲಾ ಕಲಾವಿದವರು ಜೊತೆಗೂಡಿಲ್ಲ.
ಗಟ್ಟಿಮ...
Click here to read full article from source
To read the full article or to get the complete feed from this publication, please
Contact Us.