ಭಾರತ, ಏಪ್ರಿಲ್ 23 -- ಕೇವಲ 6 ದಿನ ಹಿಂದಷ್ಟೇ ಮದುವೆಯಾಗಿದ್ದ ವಿನಯ್ ನರವಾಲ್ ಹನಿಮೂನ್‌ಗೆ ಸ್ವಿಜರ್‌ಲ್ಯಾಂಡ್ ಹೋಗಬಯಸಿದ್ದರು. ದುರದೃಷ್ಟವೋ ಏನೋ ಸಾಧ್ಯವಾಗಲಿಲ್ಲ. ಅವರು ಮಿನಿ ಸ್ವಿಜರ್‌ಲ್ಯಾಂಡ್ ಎಂದೇ ಜನಪ್ರಿಯವಾಗಿದ್ದ ಪಹಲ್ಗಾಮ್‌ನ ಬೈಸಾರನ್‌ಗೆ ಬಂದರು. ಉಗ್ರರ ಗುಂಡಿನ ದಾಳಿಗೆ ಸಿಲುಕಿ ಹುತಾತ್ಮರಾದರು.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ಅಪರಾಹ್ನ ನಡೆದ ಭಯೋತ್ಪಾದಕ ದಾಳಿ ಇಡೀ ದೇಶವನ್ನು ಬೆಚ್ಚಿಬೀಳಿಸಿತು. ಭಾರತೀಯ ನೌಕಾಪಡೆಯ ಅಧಿಕಾರಿ, ಹೊಸದಾಗಿ ಮದುವೆಯಾದ ಲೆಫ್ಟಿನೆಂಟ್ ವಿನಯ್ ನರವಾಲ್‌ ಸೇರಿದಂತೆ ಈ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದಾರೆ. ಲೆಫ್ಟಿನೆಂಟ್ ವಿನಯ್ ನರವಾಲ್‌ ಹರಿಯಾಣದ ಕರ್ನಾಲ್ ಮೂಲದವರು. ಏಪ್ರಿಲ್ 16 ರಂದು ವಿವಾಹಿತರಾದ ಅವರು ಪತ್ನಿ ಹಿಮಾನ್ಶಿ ಜತೆಗೆ ಮಧುಚಂದ್ರಕ್ಕಾಗಿ ಪಹಲ್ಗಾಮ್‌ಗೆ ಬಂದಿದ್ದರು.

ಕೊಚ್ಚಿಯ ನೌಕಾಪಡೆಯಲ್ಲಿ 26 -ವರ್ಷದ ವಿನಯ್ ನಾರ್ವಾಲ್ ಅವರನ್ನು ನಿಯೋಜಿಸಲಾಗಿತ್ತು.. ಅವರು ಎರಡು ವರ್ಷಗಳ ಹಿಂದೆ ಭಾರತೀಯ ನೌಕಾಪಡೆಗೆ ಸೇರಿದ್ದರು. ಮದುವ...