ಭಾರತ, ಏಪ್ರಿಲ್ 1 -- ದಾವಣಗೆರೆ: ಅಕ್ಟೋಬರ್ 26, 2024 ರಂದು ದಾವಣಗೆರೆ ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನ್ಯಾಮತಿ ಶಾಖೆಯಿಂದ 13 ಕೋಟಿ ರೂಪಾಯಿ ಮೌಲ್ಯದ ಸುಮಾರು 17 ಕೆಜಿ ಚಿನ್ನದ ದರೋಡೆ ಮಾಡಿದ ಪ್ರಕರಣ ನಡೆದಿತ್ತು. ಅದಾದ ಕೆಲ ತಿಂಗಳ ನಂತರ ಪೊಲೀಸರು ದರೋಡೆ ಮಾಡಿದ ಚಿನ್ನ ಮತ್ತು ದರೋಡೆಕೋರರನ್ನು ಒಟ್ಟಾಗಿ ಪತ್ತೆ ಮಾಡಿದ್ದಾರೆ. ಪೊಲೀಸರು ಪ್ರಮುಖ ಆರೋಪಿಗಳ ಹೆಸರಿನ ಪಟ್ಟಿಯನ್ನೂ ನೀಡಿದ್ದಾರೆ. ನ್ಯಾಮತಿ ಮೂಲದ 28 ವರ್ಷದ ಅಜಯ್‌ಕುಮಾರ್ ಮತ್ತು ಆತನ ನಾಲ್ವರು ಸಹಚರರನ್ನು ಈಗಾಗಲೇ ಬಂಧಿಸಿದ್ದಾರೆ.

ದರೋಡೆಯ ಹಿಂದಿನ ಪ್ರಮುಖ ಉದ್ದೇಶ ಸಾಲ ನಿರಾಕರಣೆ . ಹೌದು, ನ್ಯಾಮತಿ ತಾಲೂಕಿನ ಸುರಹೋನ್ನಿ ಗ್ರಾಮದ ನಿವಾಸಿಗಳಾದ ವಿಜಯ್‌ಕುಮಾರ್ (ತಮಿಳುನಾಡಿನವರು), ಚಂದ್ರು, ಮಂಜುನಾಥ್ ಮತ್ತು ಅಭಿಷೇಕ್ ಬಂಧಿತ ಇತರರಾಗಿದ್ದಾರೆ. ತಮಿಳುನಾಡು ಮೂಲದ ಅಜಯ್‌ಕುಮಾರ್ ತಮ್ಮ ಬೇಕರಿ ವ್ಯವಹಾರಕ್ಕಾಗಿ ಎಸ್‌ಬಿಐನ ನ್ಯಾಮತಿ ಶಾಖೆಯಿಂದ ಸಾಲ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಬ್ಯಾಂಕ್ ಸಾಲ ನೀಡಲು ನಿರಾಕರಿಸಿದೆ. ಈ ಕಾರಣಕ್ಕಾಗಿ ಅ...