ಭಾರತ, ಮಾರ್ಚ್ 14 -- 2007ರ ಐಸಿಸಿ ಟಿ20 ವಿಶ್ವಕಪ್​ ಸೆಮಿಫೈನಲ್ ನೆನಪಿದೆಯೇ? ಅವತ್ತು ಆಸ್ಟ್ರೇಲಿಯಾ ವಿರುದ್ಧ ಯುವರಾಜ್ ಸಿಂಗ್ ಅವರು ಆಡಿದ್ದ ಸ್ಫೋಟಕ ಆಟವನ್ನು ಕ್ರಿಕೆಟ್ ಪ್ರೇಮಿಗಳು ಹೇಗೆ ಮರೆಯಲು ಸಾಧ್ಯ, ಅಲ್ಲವೇ? ಕೇವಲ 30 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್​​ ಸಹಿತ ಸಿಡಿಸಿದ್ದ 70 ರನ್​​ಗಳ ಅಮೋಘ ಆಟದಿಂದ ಭಾರತ ತಂಡ ಫೈನಲ್​ಗೂ ಪ್ರವೇಶಿಸಿತ್ತು! 18 ವರ್ಷಗಳ ತಂಡದ ವಿರುದ್ಧ ಅದೇ ಪರಿಸ್ಥಿತಿಯಲ್ಲಿ ಅಂತಹದ್ದೇ ಇನ್ನಿಂಗ್ಸ್ ಅನ್ನು ಮತ್ತೆ ನೆನಪಿಸಿದ್ದಾರೆ ಯುವರಾಜ್!

ಮಾರ್ಚ್​ 13ರಂದು ನಡೆದ ಇಂಟರ್​ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20ಯ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ಮಾಸ್ಟರ್ಸ್ ವಿರುದ್ಧ ಇಂಡಿಯಾ ಮಾಸ್ಟರ್ಸ್ ಪರ ಯುವರಾಜ್ ಸಿಂಗ್ ಸಿಕ್ಸರ್​ಗಳ ಹೋಳಿ ಆಚರಿಸಿ 2007ರ ಟಿ20 ವಿಶ್ವಕಪ್​ ಬ್ಯಾಟಿಂಗ್ ವೈಭವವನ್ನು ಮರುಕಳಿಸಿದ್ದಾರೆ. ವಿಶ್ವ ಶ್ರೇಷ್ಠ ಕ್ರಿಕೆಟಿಗ ಯುವರಾಜ್, ಹಿರಿಯ ಆಸೀಸ್​ ಆಟಗಾರರ ವಿರುದ್ಧ ಬರೋಬ್ಬರಿ 7 ಸಿಕ್ಸರ್ ಚಚ್ಚಿ ಭಾರತ ತಂಡವನ್ನು ಫೈನಲ್​ಗೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

2007...