ಭಾರತ, ಮಾರ್ಚ್ 20 -- PM Narendra Modi Fitness Secret: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ 74 ವರ್ಷ, ಈ ವಯಸ್ಸಿನಲ್ಲೂ ಉತ್ಸಾಹಿ ತರುಣನಂತೆ ಓಡಾಡಿಕೊಂಡಿರುವ ಇವರನ್ನು ಕಂಡು ಯುವಕರು ನಾಚಬೇಕು. ಅವರ ಆರೋಗ್ಯ ಸ್ಥಿತಿ ಹಾಗೂ ಶಕ್ತಿ ಹಲವರಿಗೆ ಮಾದರಿ. ಇದಕ್ಕೆಲ್ಲಾ ಕಾರಣ 50 ವರ್ಷಗಳಿಂದ ಅವರು ಪಾಲಿಸಿಕೊಂಡು ಬರುತ್ತಿರುವ ಅವರ ಶಿಸ್ತಿನ ಉಪವಾಸದ ದಿನಚರಿ. ಅಮೆರಿಕ ಮೂಲದ ಪಾಡ್‌ಕ್ಯಾಸ್ಟರ್ ಮತ್ತು AI ಸಂಶೋಧಕ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ನೇರ ಸಂಭಾಷಣೆಯಲ್ಲಿ ತಮ್ಮ ಉಪವಾಸದ ದಿನಚರಿ ಹಾಗೂ ಜೀವನಶೈಲಿಯ ಬಗ್ಗೆ ಬಿಚ್ಚಿಟ್ಟಿದ್ದಾರೆ.

ಪ್ರಧಾನಿ ಮೋದಿ ಅವರು ಪ್ರತಿ ವರ್ಷ ಚಾರ್ತುಮಾಸ್ಯ ಉಪವಾಸವನ್ನು ಆಚರಿಸುತ್ತಾರೆ. 4 ತಿಂಗಳ ಕಾಲ ಕಟ್ಟುನಿಟ್ಟಿನ ಉಪವಾಸ ಮಾಡುತ್ತಾರೆ. ಜೂನ್ ಮಧ್ಯ ಭಾಗದಿಂದ ದೀಪಾವಳಿವರೆಗೆ ಮೋದಿ ಉಪವಾಸ ವ್ರತ ಆಚರಿಸುತ್ತಾರೆ. ಈ ಸಮಯದಲ್ಲಿ ಅವರು ದಿನಕ್ಕೆ ಒಂದು ಹೊತ್ತು ಮಾತ್ರ ಆಹಾರ ಸೇವಿಸುತ್ತಾರೆ. ಮಳೆಗಾಲದಲ್ಲಿ ಜೀರ್ಣಕ್ರಿಯೆ ಕೂಡ ನಿಧಾನವಾಗಿ ಆಗುವ ಕಾರಣ ಈ ಉಪವಾಸ ಉತ್ತಮ ಎನ್ನಿಸುತ್ತದೆ ...