ಭಾರತ, ಏಪ್ರಿಲ್ 28 -- ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಆ್ಯಡಂ ಗಿಲ್‌ಕ್ರಿಸ್ಟ್... ಹೀಗೆ ಕ್ರಿಕೆಟ್ ಲೋಕದಲ್ಲಿ ವಿಧ್ವಂಸಕ ಬ್ಯಾಟ್ಸ್​ಮನ್​ಗಳ ಪಟ್ಟಿ ಹೇಳುತ್ತಾ ಹೋದಂತೆಲ್ಲಾ ದೊಡ್ಡದೇ ಇದೆ. ಆದರೆ ಭಾರತೀಯ ಆಟಗಾರರ ವಿಷಯದಲ್ಲಿ ಈ ಪಟ್ಟಿಯಲ್ಲಿ ಮೊದಲಿಗರು ವೀರೇಂದ್ರ ಸೆಹ್ವಾಗ್. ಬೌಲರ್ ಯಾರೇ ಆಗಿರಲಿ, ಯಾವುದೇ ಓವರ್ ಆಗಿರಲಿ, ಮೊದಲ ಎಸೆತದಲ್ಲೇ ಸಿಕ್ಸರ್ ಹೊಡೆಯುವುದು ಸೆಹ್ವಾಗ್ ಅವರ ಶೈಲಿ.

ಹೀಗೆ ಅಬ್ಬರಿಸುವ ಮೂಲಕ ಎದುರಾಳಿ ಬೌಲರ್​ಗಳನ್ನು ಹೆದರಿಸುತ್ತಿದ್ದರು. 2000ರ ದಶಕದಲ್ಲಿ ಪಾಕಿಸ್ತಾನದ ಬೌಲರ್​​ಗೆ ನರಕ ತೋರಿಸಿದ್ದ. ಪಾಕಿಸ್ತಾನಿ ಬೌಲರ್ ರಾಣಾ ನವೀದ್-ಉಲ್-ಹುಸೇನ್​ಗೆ ಸೆಹ್ವಾಗ್ ನೈಟ್​​ಮೇರ್​ ಆಗಿದ್ದ. ಅಂದು ಸೆಹ್ವಾಗ್​ಗೆ ಭಯಬಿದ್ದು ಕೇವಲ ಎರಡು ಎಸೆತಗಳಿಗೆ ಆ ಬೌಲರ್​​ 21 ರನ್‌ ಬಿಟ್ಟುಕೊಟ್ಟಿದ್ದ. ಇಷ್ಟಕ್ಕೂ ಆ ಓವರ್​ ಏನಾಗಿತ್ತು? ಆ ಪಂದ್ಯದ ಹೈಲೈಟ್ಸ್ ಏನೆಂದು ತಿಳಿಯೋಣ.

ಈ ಪಂದ್ಯ ಸರಿಯಾಗಿ 17 ವರ್ಷಗಳ ಹಿಂದೆ ನಡೆದಿತ್ತು. ಭಾರತ ಮತ್ತು ಪಾಕಿಸ್ತಾನ ನಡ...