ಭಾರತ, ಮಾರ್ಚ್ 9 -- ದುಬೈ ಇಂಟರ್​​ನ್ಯಾಷನಲ್​ನಲ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ಕಳಪೆ ಫೀಲ್ಡಿಂಗ್ ಪ್ರದರ್ಶಿಸುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿದೆ. ಒಂದಲ್ಲ, 4 ಕ್ಯಾಚ್​​ಗಳನ್ನು ಕೈಚೆಲ್ಲಿದ ಭಾರತದ ಆಟಗಾರರು, 1 ಸುಲಭ ರನೌಟ್ ಮಿಸ್ ಮಾಡಿದರು. ಮತ್ತೊಂದೆಡೆ ಕೆಎಲ್ ರಾಹುಲ್ ಕಳಪೆ ವಿಕೆಟ್​ ಕೀಪಿಂಗ್ ಮಾಡಿದರು. ಇದು ಭಾರತ ತಂಡಕ್ಕೆ ಅತ್ಯಂತ ದುಬಾರಿ ಎಂದರೂ ತಪ್ಪಿಲ್ಲ. ಯಾರು ಯಾವಾಗ ಮಿಸ್ ಮಾಡಿದ್ರು ಎಂಬುದರ ವಿವರ ಇಲ್ಲಿದೆ.

ಮೊದಲ ವಿಕೆಟ್ ಕೈಚೆಲ್ಲಿದ್ದು ಮೊಹಮ್ಮದ್ ಶಮಿ. ಅಬ್ಬರಿಸುತ್ತಿದ್ದ ರಚಿನ್ ರವೀಂದ್ರ ಅವರು ಬೌಲಿಂಗ್ ಮಾಡುತ್ತಿದ್ದ ಶಮಿಗೆ ನೇರ ಕ್ಯಾಚ್ ಕೊಟ್ಟರು. ಇದು 7ನೇ ಓವರ್​ ಆಗಿತ್ತು. ರವೀಂದ್ರ ಚೆಂಡನ್ನು ನೇರವಾಗಿ ತನ್ನ ಕಡೆಗೆ ಹೊಡೆದಿದ್ದರಿಂದ ಕ್ಯಾಚ್ ಬಿಟ್ಟ ಭಾರತೀಯ ವೇಗಿ ಬೆರಳಿಗೆ ಗಾಯವಾಯಿತು. ಶಮಿ ಎರಡೂ ಕೈಗಳಿಂದ ಹಿಡಿಯಲು ಪ್ರಯತ್ನಿಸಿದರು...