ಭಾರತ, ಮಾರ್ಚ್ 24 -- ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಸಿಕಂದರ್ ಸಿನಿಮಾದಲ್ಲಿ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಸಹನಟಿ ರಶ್ಮಿಕಾ ಮಂದಣ್ಣ ಅವರಿಗಿಂತ ಸಲ್ಮಾನ್ ಖಾನ್‌ 31 ವರ್ಷ ದೊಡ್ಡವರು ಎಂಬ ವಯಸ್ಸಿನ ವ್ಯತ್ಯಾಸದ ಬಗ್ಗೆ ಪ್ರಶ್ನೆಯೊಂದನ್ನು ಕೇಳಲಾಗಿದೆ. ಆಗ, ಸಲ್ಮಾನ್ ಖಾನ್‌ ಅವರು ನೀಡಿದ ಉತ್ತರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ತಮ್ಮ ಮುಂಬರುವ ಚಿತ್ರ 'ಸಿಕಂದರ್' ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವೇದಿಕೆ ಮೇಲೆ ಸಲ್ಮಾನ್ ಖಾನ್ ವಯಸ್ಸಿನ ನಡುವಿನ ಅಂತರದ ಬಗ್ಗೆ ಮಾತನಾಡಿದ್ದಾರೆ. "ರಶ್ಮಿಕಾ ಮಾತ್ರವಲ್ಲ ಅವರ ಮಗಳೊಟ್ಟಿಗೂ ನಾನು ಅಭಿನಯಿಸುತ್ತೇನೆ" ಎಂದು ಸಲ್ಮಾನ್‌ ಖಾನ್‌ ಹೇಳಿದ್ದಾರೆ. ಈ ಕುರಿತು ಹೆಚ್ಚಿನ ವಿವರ ಇಲ್ಲೇ ಇದೆ ಓದಿ.

ಸಲ್ಮಾನ್ ಖಾನ್‌ ಅವರು ವೇದಿಕೆಯ ಮೇಲೆ ಮಾತನಾಡುತ್ತಾ. "ಹೌದು ನನಗೂ ಮತ್ತು ರಶ್ಮಿಕಾ ಅವರಿಗೂ 31 ವರ್ಷ ವಯಸ್ಸಿನ ಅಂತ ಇದೆ. ಆದರೆ ಸಹನಟಿಯಾಗಿ ಅಭಿನಯಿಸುತ್ತಿರುವ ರಶ್ಮಿಕಾ ಅವರಿಗೇ ಏನೂ ಸಮಸ್ಯೆ ಇಲ್ಲ. ಅವರ ತಂದೆಗೂ ಏನೂ ಸಮಸ್ಯೆ ಇಲ್ಲ. ನಿಮಗ್ಯಾಕೆ ಈ ಸಮಸ್ಯೆ?" ಎಂದ...