ಭಾರತ, ಏಪ್ರಿಲ್ 29 -- ಪಹಲ್ಗಾಮ್ ದಾಳಿ ವಿಡಿಯೋ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ ಉಗ್ರ ದಾಳಿ ಬಳಿಕ ಅಲ್ಲಿನ ಘಟನಾವಳಿಯ ಒಂದೊಂದೇ ವಿಡಿಯಗಳು ಬಹಿರಂಗವಾಗುತ್ತಿವೆ. ಇತ್ತೀಚಿನ ವಿಡಿಯೋದಲ್ಲಿ ಜಿಪ್‌ಲೈನ್ ಆಪರೇಟರ್‌ ಒಬ್ಬ 3 ಸಲ ಅಲ್ಲಾಹ್‌ ಹು ಅಕ್ಬರ್ ಹೇಳಿ ಪ್ರವಾಸಿಗನನ್ನು ಅಪಾಯಕ್ಕೆ ದೂಡಿದ ಜಿಪ್‌ಲೈನ್ ಆಪರೇಟರ್‌ಗೆ ವಿಚಾರಣೆಗೆ ಹಾಜರಾಗುವಂತೆ ಎನ್‌ಐಎ- ರಾಷ್ಟ್ರೀಯ ತನಿಖಾ ತಂಡ ನೋಟಿಸ್ ಜಾರಿಗೊಳಿಸಿದೆ.

ಜಿಪ್‌ಲೈನ್‌ ಸಾಹಸದಲ್ಲಿ ಭಾಗಿಯಾದ ಗುಜರಾತ್‌ನ ರಿಷಿ ಭಟ್‌ ಅವರನ್ನು ದೂಡಿ ಬಿಡುವ ಮೊದಲು ಜಿಪ್‌ಲೈನ್ ಆಪರೇಟರ್‌ ಮೂರು ಸಲ ಅಲ್ಲಾಹ್ ಹು ಅಕ್ಬರ್ ಎಂದು ಹೇಳಿದ್ದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ರಿಷಿ ಭಟ್ ಸೆಲ್ಫಿ ವಿಡಿಯೋ ಮಾಡಿದ್ದು, ಅದರಲ್ಲಿ ಈ ದೃಶ್ಯಗಳಿವೆ. ರಿ‍ಷಿ ಭಟ್ ಸಂಭ್ರಮಿಸುತ್ತಿದ್ದರೆ ಹಿನ್ನೆಲೆಯಲ್ಲಿ ಉಗ್ರರ ಗುಂಡಿನ ದಾಳಿಯ ದೃಶ್ಯಗಳು ದಾಖಲಾಗಿದೆ. ಜಿಪ್‌ಲೈನ್ ಆಪರೇಟರ್ ಮೂರು ಸಲ ಅಲ್ಲಾಹ್ ಹು ಅಕ್ಬರ್ ಎಂದು ಹೇಳುತ್ತಿದ್ದಂತೆ, ಕೆಳಗೆ ಉಗ್ರರ ದಾಳಿ ಶುರುವಾಗಿದೆ ಎಂಬ ಅಂಶದ ಕಡೆಗೆ ರಿಷಿ ಭಟ್ ಗಮನಸೆ...