ಭಾರತ, ಮೇ 9 -- ಪಾಕಿಸ್ತಾನವು ಮತ್ತೆ ಭಾರತದ ತಂಟೆಗೆ ಬರುತ್ತಿರುವುದು ಭಾರತವನ್ನೂ ಕೆರಳಿಸಿದೆ. ಹೀಗಾಗಿ ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದರ ಬೆನ್ನಲ್ಲೇ, ಭದ್ರತಾ ದೃಷ್ಟಿಯಿಂದ ಭಾರತ ಸರ್ಕಾರ ಕೆಲವೊಂದು ಮಹತ್ವದ ನಿರ್ಧಾರಗನ್ನು ಕೈಗೊಂಡಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಸುಳ್ಳು ಸುದ್ದಿಗಳು ಹರಡತೊಡಗಿವೆ.
ಮುಂದಿನ 2-3 ದಿನಗಳ ಕಾಲ ಭಾರತದಲ್ಲಿ ಎಟಿಎಂ ಬಂದ್ ಇರಲಿದೆ ಎಂಬ ಸುಳ್ಳು ಸುದ್ದಿ ವಾಟ್ಸಾಪ್ ಮೂಲಕ ಹರಿದಾಡುತ್ತಿದೆ. ಇದನ್ನು ಜನರು ಕೂಡಾ ಸತ್ಯ ಎಂಬುದು ನಂಬಿದ್ದರು. ಆದರೆ, ಅಸಲಿ ವಿಷಯ ಬೇರೆ ಇದೆ.
ವಾಟ್ಸಾಪ್ ಮೂಲಕ ಹರಡುತ್ತಿರುವುದು ಸುಳ್ಳು ಸುದ್ದಿ ಎಂಬುದಾಗಿ ಪಿಐಬಿ ಫ್ಯಾಕ್ಟ್ ಚೆಕ್ ಬಹಿರಂಗಪಡಿಸಿದೆ. ಹೀಗಾಗಿ ದೇಶದಲ್ಲಿ ಎಟಿಎಂಗಳು ಎಂದಿನಂತೆ ತೆರೆದಿರಲಿದೆ. ಇಂತಹ ಯಾವುದೇ ಸುಳ್ಳು ಸುದ್ದಿಗಳನ್ನು ಫಾರ್ವರ್ಡ್ ಮಾಡದಂತೆ ಪಿಐಬಿ ಮನವಿ ಮಾಡಿದೆ.
ಅತ್ತ ಯುದ್ಧದ ಭೀತಿಯ ವಾತಾವರಣದಿಂದಾಗಿ ಪೆಟ್ರೋಲ್ ಸಿಗುತ್ತಾ? ಪೆಟ್ರೋಲ್ ಬಂಕ್‌ಗಳು ತೆರೆದಿರುತ್ತಾ ಎಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.