ಭಾರತ, ಏಪ್ರಿಲ್ 21 -- ಸಿಂಫೋನಿ ಸ್ವರ ಪ್ರತಿಷ್ಠಾನ ಸಂಸ್ಥೆಯ ಕಳೆದೆರಡು ವರ್ಷಗಳಂತೆ ಈ ಬಾರಿಯೂ ರಾಜ ಪುನೀತೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ಮೂರನೇ ವರ್ಷದ ರಾಜ ಪುನೀತೋತ್ಸವದಲ್ಲಿ ಸಂಗೀತ ರಸಸಂಜೆ ಹಾಗೂ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಹಾಗೂ ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಂಡಿರುವ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮವು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.

ಕನ್ನಡ ಚಿತ್ರರಂಗದ ಅಮೂಲ್ಯ ರತ್ನಗಳಾದ ಡಾ ರಾಜ್ ಕುಮಾರ್ ಹಾಗೂ ಡಾ ಪುನೀತ್ ರಾಜಕುಮಾರ್‌ ಅವರ ಸವಿನೆನಪಿನಲ್ಲಿ ನಡೆದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಪ್ರಣಯರಾಜ ಡಾ ಶ್ರೀನಾಥ್ ಅವರಿಗೆ 'ರಾಜ್ ರತ್ನ' ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥರಾದ ಡಾ ರವೀಂದ್ರನಾಥ್ ಅವರಿಗೆ 'ಪುನೀತ್ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭ ಹಿರಿಯ ಸಿನಿಮಾ ಪ್ರಚಾರಕರ್ತರಾದ ನಾಗೇಂದ್ರ ಹಾಗೂ ನಟಿ ರೂಪಿಕಾಗೆ ಗೌರವ ಸಮರ್ಪಣೆ ಮಾಡಲಾಯಿತು. ನಟ ಶ್ರೀನಾಥ್ ಸಂಸ್ಥೆಯ ಕಾರ್ಯದ ಬಗ್ಗೆ ಮೆಚ್ಚಿ ಮಾತನಾಡು...