ಭಾರತ, ಮೇ 28 -- ಏಕನಾ ಕ್ರೀಡಾಂಗಣದಲ್ಲಿ ಮೇ 27ರಂದು ಲಕ್ನೋ ಸೂಪರ್ ಜೈಂಟ್ಸ್​ 228 ರನ್​​ಗಳ ಗುರಿ ಬೆನ್ನಟ್ಟುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ ನೂತನ ದಾಖಲೆ ನಿರ್ಮಿಸಿದೆ.

ಆರ್​ಸಿಬಿ ಐಪಿಎಲ್​​ನಲ್ಲಿ ದೊಡ್ಡ ರನ್ ಚೇಸ್​ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಆರ್​​​ಸಿಬಿ, ಐಪಿಎಲ್​​​ನಲ್ಲಿ 3ನೇ ಬಾರಿಗೆ 200 ಅಥವಾ ಅದಕ್ಕಿಂತ ಹೆಚ್ಚಿನ ರನ್ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ.

2010ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಪಂಜಾಬ್ ಕಿಂಗ್ಸ್​ 204 ರನ್​ಗಳ ಗುರಿ ಬೆನ್ನಟ್ಟಿತ್ತು. ಇದು ಆರ್​​ಸಿಬಿ ತಂಡದ ಇದುವರೆಗಿನ ಗರಿಷ್ಠ ರನ್ ಚೇಸ್ ಆಗಿತ್ತು.

ಕಳೆದ ವರ್ಷ ಅಹ್ಮದಾಬಾದ್​​​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 201 ರನ್​​ ಗುರಿ ಬೆನ್ನಟ್ಟಿತ್ತು. ಇದೀಗ 228 ರನ್ ಗುರಿ ಬೆನ್ನಟ್ಟಿ ದಾಳಲೆ ಬರೆದಿದೆ. ಐಪಿಎಲ್​ನಲ್ಲೂ ಇದು 3ನೇ ಅತಿ ದೊಡ್ಡ ರನ್ ಚೇಸ್ ಆಗಿದೆ.

2024ರಲ್ಲಿ ಕೆಕೆಆರ್ ವಿರುದ್ಧ 262 ರನ್ ಗುರಿ, ಇದೇ ವರ್ಷ ಪಂಜಾಬ್ ವಿರುದ್ಧ ಎಸ್​ಆರ್​ಹೆಚ್​ 246 ರನ...