ಭಾರತ, ಏಪ್ರಿಲ್ 5 -- ಭಾರತವು ಒಲಿಂಪಿಕ್ಸ್‌ ಆತಿಥ್ಯಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದೆ. ಅಹಮದಾಬಾದ್‌ನಲ್ಲಿ ಒಲಿಂಪಿಕ್ಸ್‌ ಆಯೋಜಿಸಲು ಬೇಕಾದ ಕ್ರೀಡಾಂಗಣಗಳ ನಿರ್ಮಾಣವನ್ನು ವರ್ಷಗಳ ಹಿಂದೆಯೇ ಆರಂಭಿಸಲಾಗಿದೆ. 2036ರ ಒಲಿಂಪಿಕ್ಸ್‌ಗೆ ಭಾರತ ಬಿಡ್ಡಿಂಗ್ ಮಾಡುತ್ತಿರುವ ಮಧ್ಯೆ, ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಮತ್ತೊಂದು ಸಿದ್ಧತೆಯನ್ನು ಆರಂಭಿಸಿದೆ. ಭಾರತದಲ್ಲಿ 10 ಒಲಿಂಪಿಕ್ ತರಬೇತಿ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ.

2024ರ ನವೆಂಬರ್‌ ತಿಂಗಳಲ್ಲಿ, ಭಾರತವು 2036ರ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸುವ ಬಯಕೆಯನ್ನು ವ್ಯಕ್ತಪಡಿಸಿ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಭವಿಷ್ಯದ ಆತಿಥೇಯ ಆಯೋಗಕ್ಕೆ ಔಪಚಾರಿಕವಾಗಿ 'ಉದ್ದೇಶದ ಪತ್ರ' ಸಲ್ಲಿಸಿತ್ತು. ಇದೀಗ ಲಿಂಪಿಕ್ ತರಬೇತಿ ಕೇಂದ್ರಗಳನ್ನು ನಿರ್ಮಿಸಲು ಮುಂದಾಗಿರುವ ಬಗ್ಗೆ ಸುದ್ದಿಸಂಸ್ಥೆ ಎನ್‌ಡಿಟಿವಿ ವರದಿ ಮಾಡಿದೆ.

2036ರ ಒಲಿಂಪಿಕ್ಸ್‌ಗಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ತನ್ನ ಸಿದ್ಧತೆಗಳ...