ಬೆಂಗಳೂರು, ಏಪ್ರಿಲ್ 28 -- ಈಗಾಗಲೇ ಒಂದು ಬಾರಿ ಕಾಮನ್‌ವೆಲ್ತ್‌ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸುರುವ ಭಾರತವು, ಮತ್ತೊಮ್ಮೆ ಅದ್ಧೂರಿ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ಆಸಕ್ತಿ ತೋರಿದೆ. 2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತವು ಆಸಕ್ತಿ ಇರುವುದಾಗಿ ಘೋಷಿಸಿದೆ. ಇದುವರೆಗೆ ಒಮ್ಮೆಯೂ ಒಲಿಂಪಿಕ್ಸ್ ಆಯೋಜಿಸದ ಭಾರತವು, 2036ರ ಒಲಿಂಪಿಕ್ಸ್‌ ಆಯೋಜನೆಗೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಇದರ ನಡುವೆ, ಮತ್ತೊಮ್ಮೆ ಕಾಮನ್‌ವೆಲ್ತ್‌ ಕ್ರೀಡಾಕೂಟವನ್ನೂ ನಡೆಸುವ ಇರಾದೆ ಹೊಂದಿದೆ. ಈ ಹಿಂದೆ 2010ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ಕ್ರೀಡಾಕೂಟ ಯಶಸ್ವಿಯಾದರೂ, ವ್ಯಾಪಕ ಭ್ರಷ್ಟಾಚಾರ ಮತ್ತು ದುರುಪಯೋಗದ ಆರೋಪಗಳಿಂದ ಕ್ರೀಡಾಕೂಟದ ಘನತೆಗೆ ಧಕ್ಕೆಯಾಗಿದ್ದು ವಾಸ್ತವ.

ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲ ಕಾಮನ್‌ವೆಲ್ತ್ ಕ್ರೀಡಾಕೂಟವೂ ಒಂದು. ಒಲಿಂಪಿಕ್ಸ್ ಕೂಟವು ಭೂಮಿಯ ಮೇಲಿನ ಅತಿದೊಡ್ಡ ಮತ್ತು ಹಳೆಯ ಬಹು-ಕ್ರೀಡಾ ಜಾಗತಿಕ ಕಾರ್ಯಕ್ರಮವಾಗಿದೆ...