ಭಾರತ, ಮಾರ್ಚ್ 30 -- 2026ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಎರಡು ಬಿಗ್‌ ಬಜೆಟ್‌ ಸಿನಿಮಾಗಳು ಬಿಡುಗಡೆಯಾಗಲಿದೆ. ಟಾಕ್ಸಿಕ್ ಮತ್ತು ರಾಮಾಯಾಣ ಸಿನಿಮಾ ಬಿಡುಗಡೆಗಾಗಿ ಸಾಕಷ್ಟು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಆ ಸಿನಿಮಾಗಳು ಯಾವಾಗ ಬಿಡುಗಡೆಯಾಗುತ್ತವೆ? ಯಾವ ದಿನಾಂಕದಂದು ತೆರೆ ಮೇಲೆ ಬರಬಹುದು ಎಂಬ ಪ್ರಶ್ನೆಗಳು ಹಲವರಲ್ಲಿದೆ. ಸಾಮಾನ್ಯವಾಗಿ ವಾರಾಂತ್ಯಕ್ಕೆ ಶುಕ್ರವಾರದಂದು ಸಿನಿಮಾಗಳು ಬಿಡುಗಡೆಯಾಗುತ್ತವೆ. ಅದೇ ರೀತಿ ಯಶ್‌ ಅಭಿನಯದ ಈ ಎರಡೂ ಸಿನಿಮಾಗಳು ಸಹ ರಜಾ ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ರಜಾ ದಿನಗಳಲ್ಲಿ ಬಿಡುಗಡೆಯಾದರೆ ಹೆಚ್ಚಿನ ಕಲೆಕ್ಷನ್ ಆಗುವ ನಿರೀಕ್ಷೆಯೂ ಸಹಜವಾಗಿ ಇರುತ್ತದೆ.

ಯಶ್‌ ಅಭಿನಯದ KGF ಸಿನಿಮಾ ಹಿಟ್ ಆದಾಗಿನಿಂದ ಯಶ್‌ ಅವರ ಸಿನಿಮಾ ಎಂದರೆ ಸಾಕು ಸಾಕಷ್ಟು ಜನರಲ್ಲಿ ನಿರೀಕ್ಷೆ ಹೆಚ್ಚುತ್ತದೆ. ಅದೇ ನಿರೀಕ್ಷೆಯನ್ನು ಈಗಾಗಲೆ ಬಿಡುಗಡೆಯಾದ ಟ್ರೇಲರ್ ಕೂಡ ಹೆಚ್ಚು ಮಾಡಿದೆ. ಹೀಗಿರುವಾಗ ಅಭಿಮಾನಿಗಳ ಕಾತರ ಹಾಗೂ ಕಾಯುವಿಕೆಗೆ ಇಂದಲ್ಲ ನಾಳೆ ಬ್ರೇಕ್ ...