Bengaluru, ಮಾರ್ಚ್ 9 -- ಡುಕಾಟಿ ಪ್ಯಾನಿಗೇಲ್ ಸೂಪರ್‌ಬೈಕ್2025ರ ಡುಕಾಟಿ ಪ್ಯಾನಿಗೇಲ್ ವಿ4 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಇದು ಸ್ಟ್ಯಾಂಡರ್ಡ್ ಮತ್ತು ಎಸ್ ಎಂಬ ಎರಡು ರೂಪಾಂತರಗಳಲ್ಲಿ ಭಾರತಕ್ಕೆ ಬರುತ್ತದೆ. ಇವುಗಳ ಬೆಲೆ ಕ್ರಮವಾಗಿ ರೂ. 29.99 ಲಕ್ಷ ಮತ್ತು ರೂ. 36.50 ಲಕ್ಷಗಳಾಗಿದೆ. ಎರಡೂ ಬೆಲೆಗಳು ಎಕ್ಸ್ ಶೋರೂಂ ದರಗಳಾಗಿವೆ. ಬೆಂಗಳೂರಿನಲ್ಲಿ ಆನ್‌ರೋಡ್ ದರ ಕ್ರಮವಾಗಿ ರೂ. 36 ಲಕ್ಷ ಮತ್ತು ರೂ. 44 ಲಕ್ಷ ಇರಲಿದೆ.

ಈ ಬೈಕುಗಳನ್ನು ಕಂಪ್ಲೀಟ್ ಬಿಲ್ಟ್ ಯೂನಿಟ್ (ಸಿಬಿಯು) ವಿಧಾನದ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದ್ದು, ಆರಂಭಿಕ ಬ್ಯಾಚ್ ಈಗಾಗಲೇ ಮಾರಾಟವಾಗಿದೆ. ಅಧಿಕೃತ ಡೀಲರ್ ಶಿಪ್ ಈಗ ಕಾಯ್ದಿರಿಸಿದ ಗ್ರಾಹಕರಿಗೆ ಮೋಟಾರ್ ಸೈಕಲ್ ವಿತರಣೆಯನ್ನು ಪ್ರಾರಂಭಿಸುತ್ತವೆ.

ಪರಿಷ್ಕೃತ ಡ್ಯಾಶ್‌ಬೋರ್ಡ್‌ 8:3 ಅನುಪಾತದೊಂದಿಗೆ 6.9-ಇಂಚಿನ ಡಿಸ್ಪ್ಲೇ ಹೊಂದಿದೆ, ಫೇರಿಂಗ್‌ನಲ್ಲಿ ಸ್ಥಾಪಿಸಿದಾಗ ವಿಂಡ್‌ಶೀಲ್ಡ್ ಮೂಲಕ ಚಾಲಕನ ವೀಕ್ಷಣೆಗೆ ಅಡ್ಡಿಯಾಗದಂತೆ ಆರಾಮದಾಯಕ ಓದುವಿಕೆ...