ಭಾರತ, ಏಪ್ರಿಲ್ 13 -- ಆರ್ಥಿಕ ತಜ್ಞ, ಲೇಖಕರಾದ ರಂಗಸ್ವಾಮಿ ಮೂಕನಹಳ್ಳಿ ಅವರ ಫೇಸ್ ಬುಕ್ ಬರಹವನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ. ಇದು 2025ನೇ ಇಸವಿ. ಈ ಸಂಖ್ಯೆಗಳನ್ನು ಕೂಡಿದರೆ ಒಟ್ಟು 9 ಆಗುತ್ತದೆ. ಒಂಬತ್ತು ನ್ಯೂಮರಾಲಜಿ ಮತ್ತು ಹಿಂದೂ ನಂಬಿಕೆಗಳ ಪ್ರಕಾರ ಹನುಮನ ಸಂಖ್ಯೆ. ಹೀಗಾಗಿ ಈ ವರ್ಷವನ್ನು ಹನುಮನ ವರ್ಷ ಎಂದು ಕೂಡ ಕರೆಯಬಹುದು. ಒಂಬತ್ತು ಸಂಖ್ಯೆಯನ್ನು ಮಂಗಳ ಗ್ರಹಕ್ಕೂ ತಳುಕು ಹಾಕಲಾಗಿದೆ. ಮಂಗಳ ಪ್ಲಾನೆಟ್ ಆಫ್ ಎನರ್ಜಿ ಮತ್ತು ಆಕ್ಷನ್. ನೀವು ಒಂಬತ್ತು ಸಂಖ್ಯೆಯಲ್ಲಿ ಜನಿಸಿದ ಜನರನ್ನು ಅಂದರೆ 9,18,27 ದಿನಾಂಕದಂದು ಜನಿಸಿದವರನ್ನು ಗಮನಿಸಿ ನೋಡಿ , ಎನರ್ಜಿ ಮತ್ತು ಆಕ್ಷನ್ ಎಂದರೇನು ಎನ್ನುವುದರ ನಿಜವಾದ ಅರ್ಥ ತಿಳಿಯುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಕೊಡಬೇಕೆಂದರೆ ನಮ್ಮ ದೇವೇಗೌಡರನ್ನು ನೋಡಿ ! 91ರ ಹರಯದಲ್ಲೂ ಕೆಲವೇ ದಿನಗಳ ಹಿಂದೆ ಅವರು ರಾಜ್ಯಸಭೆಯಲ್ಲಿ ಮಾಡಿದ ಭಾಷಣ ಕೇಳಿನೋಡಿ !

ಎಲ್ಲಾ 9 ರ ಸಂಖ್ಯೆಯಲ್ಲಿ ಜನಿಸಿದವರೂ ಮತ್ತೇಕೆ ಪ್ರಸಿದ್ದರೂ ಹಣವಂತರೂ ಆಗಿಲ್ಲ? ಎನ್ನುವ ಪ್ರಶ್ನೆ ಹುಟ್ಟುವ...