Bengaluru, ಮಾರ್ಚ್ 14 -- ಗ್ರಹಗಳು ಒಂದು ನಿರ್ದಿಷ್ಟ ಸಮಯದಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ರಾಶಿಗಳಿಗೆ ಗ್ರಹಗಳ ಪ್ರವೇಶವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಇಂದು (ಮಾರ್ಚ್ 14, ಶುಕ್ರವಾರ) ಬುಧ ಹಿಮ್ಮುಖವಾಗಿ ಸಂಚರಿಸಲಿದೆ. 2025 ರಲ್ಲಿ ಬುಧನ ಮೊದಲ ಹಿಮ್ಮುಖ ಸಂಚಾರ ಇದಾಗಿದೆ. ಏಪ್ರಿಲ್ 7 ರವರೆಗೆ ಬುಧನ ಈ ಸಂಚಾರವು ಮುಂದುವರಿಯಲಿದೆ. ಏಪ್ರಿಲ್ 12 ರಂದು ನೇರವಾಗಿ ಸಂಚರಿಸಲು ಆರಂಭಿಸುತ್ತಾನೆ. ಬುಧನ ಈ ಸಂಚಾರದಿಂದ 12 ರಾಶಿಯವರ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ. ಯಾರಿಗೆ ಶುಭ ಫಲಗಳಿವೆ, ಯಾರಿಗೆ ಸವಾಲುಗಳು ಇರುತ್ತವೆ ಎಂಬುದನ್ನು ರಾಶಿವಾರು ಇಲ್ಲಿ ತಿಳಿಯೋಣ.

ಮೇಷ ರಾಶಿಯವರು ಈ ಅವಧಿಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಆಂತರಿಕವಾಗಿ ತುಂಬಾ ಒಳ್ಳೆಯ ಸ್ವಭಾವದವರು. ಇತರರಿಗೆ ಸಹಾಯ ಮಾಡುವ ಗುಣ ಇರುತ್ತದೆ. ಮುಂಬರುವ ವಾರಗಳಲ್ಲಿ ತಪ್ಪು ತಿಳುವಳಿಕೆಗಳು ಮತ್ತು ತಪ್ಪು ಸಂವಹನದ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಎಲ್ಲಾ ಪ್ರಯತ್ನಗಳನ್ನು ಆಂತರಿಕವಾಗಿ ಮತ್ತ...