Bengaluru, ಏಪ್ರಿಲ್ 27 -- ಗಂಗಾ ಸಪ್ತಮಿ 2025: ಹಿಂದೂ ಧರ್ಮದಲ್ಲಿ ಗಂಗಾ ಸಪ್ತಮಿಗೆ ಸಾಕಷ್ಟು ಮಹತ್ವವಿದೆ. ಧಾರ್ಮಿಕ ದಂತಕಥೆಗಳ ಪ್ರಕಾರ, ಈ ದಿನದಂದು, ಗಂಗಾ ದೇವಿಯು ಸ್ವರ್ಗದಿಂದ ಭೂಮಿಗೆ ಇಳಿದು ಬಂದಳು. ಈ ಶುಭ ದಿನದಂದು, ಗಂಗಾ ದೇವಿಯನ್ನು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ಈ ದಿನವನ್ನು ಗಂಗಾ ಜಯಂತಿ ಅಂತಲೂ ಆಚರಿಸಲಾಗುತ್ತದೆ. ಗಂಗಾ ಸಪ್ತಮಿಯನ್ನು ಪ್ರತಿವರ್ಷ ವೈಶಾಖ ಶುಕ್ಲ ಪಕ್ಷದ ಏಳನೇ ದಿನದಂದು ಆಚರಿಸಲಾಗುತ್ತದೆ. ಗಂಗಾ ಸಪ್ತಮಿಯ ದಿನಾಂಕ, ಪೂಜೆ, ಶುಭ ಸಮಯ ಮತ್ತು ಮಹತ್ವವನ್ನು ತಿಳಿದುಕೊಳ್ಳೋಣ.

ಗಂಗಾ ಸಪ್ತಮಿ ಯಾವಾಗ: ಈ ವರ್ಷ, ಗಂಗಾ ಸಪ್ತಮಿಯನ್ನು 2025ರ ಮೇ 3 ರ ಶನಿವಾರ ಆಚರಿಸಲಾಗುತ್ತದೆ.

ತಿಥಿ ಪ್ರಾರಂಭ: 2025ರ ಮೇ 03 ರಂದು ಬೆಳಿಗ್ಗೆ 07:51

ಸಪ್ತಮಿ ತಿಥಿ ಕೊನೆಗೊಳ್ಳವ ಸಮಯ: 2025ರ ಮೇ 04 ರಂದು ಬೆಳಿಗ್ಗೆ 07:18

ಗಂಗಾ ಸಪ್ತಮಿ ಮಧ್ಯಾಹ್ನದ ಮುಹೂರ್ತ: ಬೆಳಿಗ್ಗೆ 10:58 ರಿಂದ ಮಧ್ಯಾಹ್ನ 01:38, ಅವಧಿ: 02 ಗಂಟೆ 40 ನಿಮಿಷ

ಗಂಗಾ ಸಪ್ತಮಿಯ ಶುಭ ದಿನದಂದು ಗಂಗಾ ನದಿಯಲ್ಲಿ ...