Bangalore, ಮೇ 1 -- ಬೆಂಗಳೂರು: ಕೆಲವೇ ದಿನಗಳಲ್ಲಿ ಮುಂಗಾರು ಆರಂಭವಾಗಲಿದ್ದು, ಈ ವರ್ಷ ಹೆಚ್ಚು ಮಳೆಯಾಗುವ ಸಂಭವವಿದೆ. ಇದರಿಂದ ಸತತ ಎರಡನೇ ವರ್ಷ ಹಾಲಿನ ಉತ್ಪಾದನೆ ಹೆಚ್ಚಾಗಲಿದೆ. ಹಾಲು ಉತ್ಪಾದನೆ ಹೆಚ್ಚಾಗುವುದು ಕರ್ನಾಟಕ ಹಾಲು ಮಂಡಳ ಅಥವಾ ಹಾಲು ಉತ್ಪಾದಕರಿಗೆ ಶುಭ ಸುದ್ದಿಯೇನಲ್ಲ. 2024ರಲ್ಲಿ ಉತ್ತಮ ಮಳೆಯಾಗಿದ್ದರಿಂದ ಬರಗಾಲದಿಂದ ಹೊರಬರಲು ನೆರವಾಯಿತು. ಹಾಗೆಯೇ ಹಾಲು ಉತ್ಪಾದನೆಯೂ ಹೆಚ್ಚಿತು. ಕಳೆದ ವರ್ಷ ಪ್ರತಿದಿನ ಸರಾಸರಿ 85 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದ್ದರೆ ಜುಲೈನಲ್ಲಿ ಮಾತ್ರ ಪ್ರತಿದಿನದ ಹಾಲು ಸಂಗ್ರಹ 1 ಕೋಟಿ ಲೀಟರ್‌ ದಾಟಿತ್ತು. ಈ ವರ್ಷ ಜುಲೈ ಆಗಸ್ಟ್‌ ನಲ್ಲಿ ಹಾಲು ಉತ್ಪಾದನೆ 1.2 ಲೀಟರ್‌ ದಾಟಬಹುದು ಎಂದು ಕೆಎಂಎಫ್‌ ಅಧಿಕಾರಿಗಳು ಊಹಿಸುತ್ತಾರೆ.

ಬೆಂಗಳೂರು ಹಾಲು ಒಕ್ಕೂಟ ಬಮೂಲ್‌ ಅಧ್ಯಕ್ಷ ಎಚ್.‌ಎಸ್. ರಾಜಕುಮಾರ್‌ ಜನವರಿ ತಿಂಗಳಿಂದಲೇ ಹಾಲು ಉತ್ಪಾದನೆ ಹೆಚ್ಚುತ್ತಿದೆ. ಪ್ರಸ್ತುತ ಈಗ ದಿನಂಪ್ರತಿ 92 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದ್ದು ಗರಿಷ್ಠ 1.2 ಕೋಟಿ ಲೀಟರ್‌ ದಾಟಲಿ...