ಭಾರತ, ಮಾರ್ಚ್ 16 -- ಅದು ಐಪಿಎಲ್‌ ಪಂದ್ಯಾವಳಿಯ 2019ರ ಆವೃತ್ತಿ. ಜೈಪುರದಲ್ಲಿ ನಡೆದ ಗ್ರೂಪ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯವು ರೋಚಕ ಅಂತ್ಯವನ್ನು ಕಂಡಿದ್ದು ಒಂದೆಡೆಯಾದರೆ, ಪಂದ್ಯದ ಅಂತಿಮ ಓವರ್‌ನಲ್ಲಿ, ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಅವರ ನಡೆಯು ಭಾರಿ ವಿವಾದ ಹಾಗೂ ಚರ್ಚೆಗೆ ಕಾರಣವಾಗಿತ್ತು. ಸಿಎಸ್‌ಕೆ ತಂಡ ಹಾಗೂ ಎಂಎಸ್‌ ಧೋವಿ ವಿರುದ್ಧ ವ್ಯಾಪಕ ಟೀಕೆ, ಆಕ್ರೋಶವೂ ವ್ಯಕ್ತವಾಗಿತ್ತು. ಇದೀಗ, ಅಂದು ತಾನು ನಡೆದುಕೊಂಡ ರೀತಿ ನಿಜಕ್ಕೂ ಸರಿ ಇರಲಿಲ್ಲ ಎಂದು ಧೋನಿ ಹೇಳಿಕೊಂಡಿದ್ದಾರೆ.

ಆ ಪಂದ್ಯದಲ್ಲಿ ಆಗಿದ್ದಿಷ್ಟು. ಚೇಸಿಂಗ್‌ ಮಾಡುತ್ತಿದ್ದ ಸಿಎಸ್‌ಕೆ ತಂಡಕ್ಕೆ ಅಂತಿಮ ಓವರ್‌ನಲ್ಲಿ 18 ರನ್‌ಗಳು ಬೇಕಾಗಿದ್ದವು. ಓವರ್‌ನ ಮೂರನೇ ಎಸೆತದಲ್ಲಿ ಧೋನಿ ಔಟಾದರು. ಕೊನೆಯ ಮೂರು ಎಸೆತಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ರವೀಂದ್ರ ಜಡೇಜಾ ಹಾಗೂ ಮಿಚೆಲ್ ಸ್ಯಾಂಟ್ನರ್ ಮೇಲೆ ಬಿತ್ತು. ಬೆನ್ ಸ್ಟೋಕ್ಸ್ ಅವರ ನಾಲ್ಕನೇ ...