ಭಾರತ, ಏಪ್ರಿಲ್ 29 -- ವೈಜ್ಞಾನಿಕ ಕಾದಂಬರಿ ಆಧಾರಿತ ಮಲಯಾಳಂ ಸಿನಿಮಾ 'ಸಮರ' ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 2 ವರ್ಷಗಳ ನಂತರ ಒಟಿಟಿ ಬರುತ್ತಿದೆ. ರೆಹಮಾನ್ ಹಾಗೂ ಭರತ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದ ಈ ಸಿನಿಮಾವು ಏಪ್ರಿಲ್ 30 ರಿಂದ ಸೈನಾ ಪ್ಲೇ ಒಟಿಟಿ ವೇದಿಕೆಯಲ್ಲಿ ಪ್ರಸಾರ ಆರಂಭಿಸಲಿದೆ. ಈ ಸಿನಿಮಾವನ್ನು ಜಾಂಬಿ ಪರಿಕಲ್ಪನೆಯೊಂದಿಗೆ ನಿರ್ಮಿಸಲಾಗಿದೆ. ಚಾರ್ಲ್ಸ್ ಜೋಸೆಫ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಮರ ಚಿತ್ರವು ವಿಭಿನ್ನ ಪ್ರಯತ್ನ ಎಂದು ಪೇಕ್ಷಕರಿಂದ ಪ್ರಶಂಸೆ ಪಡೆಯಿತು. ಆದರೆ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಚಿತ್ರದ ದೃಶ್ಯಗಳು ಮತ್ತು ಸಾಹಸ ಪ್ರಸಂಗಗಳು ಹಾಲಿವುಡ್ ಶೈಲಿಯಲ್ಲಿವೆ ಎಂಬ ಹೆಗ್ಗಳಿಕೆ ಪಡೆದಿತ್ತು. ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ ನಿರ್ದೇಶನ ಮಾಡಿದ್ದರು. ಚಿತ್ರವು ಗಲ್ಲಾಪೆಟ್ಟಿಗೆ ತುಂಬಿಸದೇ ಇದ್ದರೂ ಸಾಕಷ್ಟು ಹೆಸರು ಮಾಡಿತ್ತು, ಅಲ್ಲದೇ ಪ್ರೇಕ್ಷಕರು ಕೂಡ ಈ ವಿಭಿನ್ನ ಪ್ರಯೋಗವನ್ನು...