ಭಾರತ, ಏಪ್ರಿಲ್ 10 -- 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ (LA Olympics) 128 ವರ್ಷಗಳ ನಂತರ ಕ್ರಿಕೆಟ್ ಸೇರ್ಪಡೆಯಾಗಿದ್ದು, ನಿರೀಕ್ಷೆ ದುಪ್ಪಟ್ಟಾಗಿದೆ. ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನಡೆಯಲಿದ್ದು, 31 ಕ್ರೀಡೆಗಳು ಮತ್ತು 351 ಪದಕಗಳ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ. ಈ ಬಾರಿ ಕ್ರಿಕೆಟ್ ಜೊತೆಗೆ ಫ್ಲ್ಯಾಗ್ ಫುಟ್ಬಾಲ್, ಬೇಸ್‌ಬಾಲ್/ಸಾಫ್ಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್‌ ಕ್ರೀಡೆಗಳನ್ನೂ ಸೇರ್ಪಡೆ ಮಾಡಲಾಗಿದೆ.

ಒಲಿಂಪಿಕ್ಸ್​​ನಲ್ಲಿ ಕೊನೆಯದಾಗಿ ಕ್ರಿಕೆಟ್ ಕಾಣಿಸಿಕೊಂಡಿದ್ದು 1900ರಲ್ಲಿ. ಇದೀಗ ದೊಡ್ಡ ಅಂತರದ ನಂತರ ಕ್ರಿಕೆಟ್ ಆಟವನ್ನು ಸೇರಿಸಲಾಗಿದೆ. 2028ರ ಕ್ರೀಡಾಕೂಟದಲ್ಲಿ ಪುರುಷ-ಮಹಿಳಾ ತಂಡಗಳು ಸ್ಪರ್ಧಿಸಲಿದೆ. ಒಟ್ಟು ತಲಾ 6 ತಂಡಗಳು ಭಾಗವಹಿಸಲಿವೆ. ಆತಿಥೇಯ ರಾಷ್ಟ್ರವಾಗಿ ಯುನೈಟೆಡ್ ಸ್ಟೇಟ್ಸ್ ನೇರ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಆದರೆ ಉಳಿದ 5 ಸ್ಥಾನಕ್ಕೆ ಹಲವು ತಂಡಗಳ ನಡುವೆ ಪೈಪೋಟಿ ಏರ್ಪಡಲಿದೆ.

ಈ ವರದಿಯಲ್ಲಿ ಲಾಸ್ ಏಂಜಲೀಸ್ 2028 ಒಲಿಂಪಿಕ್ಸ್‌ನಲ್ಲಿ ...