Bengaluru, ಏಪ್ರಿಲ್ 25 -- ಬಿಗ್‌ ಬಾಸ್‌ ಕನ್ನಡ 11 ಮುಗಿಯುತ್ತಿದ್ದಂತೆ, ಕಲರ್ಸ್‌ ಕನ್ನಡದಲ್ಲಿ ಅವಳಿ ಸೀರಿಯಲ್‌ಗಳು ಶುರುವಾದವು. ಆ ಪೈಕಿ ಒಂದು ʻಯಜಮಾನʼ, ಇನ್ನೊಂದು ʻವಧುʼ. ದೊಡ್ಡ ಪ್ರಚಾರದೊಂದಿಗೆ ಪ್ರಸಾರ ಆರಂಭಿಸಿದ ಈ ಸೀರಿಯಲ್‌ಗಳು ವೀಕ್ಷಕರಿಂದ ನಿರೀಕ್ಷಿತ ಪ್ರಮಾಣದ ಮೆಚ್ಚುಗೆ ಪಡೆಯಲಿಲ್ಲ. ಅದರಲ್ಲೂ ವಧು ಸೀರಿಯಲ್‌ ಟಿಆರ್‌ಪಿಯಲ್ಲಿ ಮೇಲೆಳದೆ ಮಹಾಕುಸಿತದತ್ತ ಸಾಗಿದ್ದೇ ಹೆಚ್ಚು. 15ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ʻವಧುʼಗೆ ಸಿಕ್ಕಿದ್ದು ಈ ವರೆಗಿನ ಕನಿಷ್ಠ ಟಿವಿಆರ್‌ ನಂಬರ್‌. ಅದಕ್ಕೆ ಕಾರಣ ಹುಡುಕುತ್ತ ಹೊರಟರೆ; ಐಪಿಎಲ್‌ ಸಹ ಅಲ್ಲಿ ಕಾಣಿಸುತ್ತೆ!

15ನೇ ವಾರದ ಟಿಆರ್‌ಪಿಯಲ್ಲಿ ಒಟ್ಟಾರೆ ಎಲ್ಲ ವಾಹಿನಿಗಳ ಸೀರಿಯಲ್‌ಗಳ ನಂಬರ್‌ ಕುಸಿತ ಕಂಡಿದೆ. ಕೇವಲ ಕಲರ್ಸ್‌ ಕನ್ನಡ ಮಾತ್ರವಲ್ಲದೆ, ಜೀ ಕನ್ನಡ, ಸ್ಟಾರ್‌ ಸುವರ್ಣ, ಉದಯ ಟಿವಿಯ ಧಾರಾವಾಹಿಗಳೂ ಅಂದುಕೊಂಡಷ್ಟು ನಂಬರ್‌ ತಂದಿಲ್ಲ. ಐಪಿಎಲ್‌ ಹಿನ್ನೆಲೆಯಲ್ಲಿ ಸೀರಿಯಲ್‌ಗಳ ವೀಕ್ಷಕರ ಸಂಖ್ಯೆ ಕುಸಿತ ಕಂಡಿದೆ. ಹಾಗಾದರೆ, ಕಲರ್ಸ್‌ ಕನ್ನಡದ 10 ಧಾರಾವ...