ಭಾರತ, ಮೇ 27 -- 2024ರ ಐಪಿಎಲ್​ನ ರನ್ನರ್​ಅಪ್ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆದಿದ್ದ ವೇಗಿ ಟಿ ನಟರಾಜನ್ ಈ ಸಲ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪರ ಆಡಿದರು. ಕಳೆದ ವರ್ಷ ಹೀರೋ ಆಗಿದ್ದ ನಟ್ಟು ಈ ಬಾರಿ ಆಗಿದ್ದು ಝೀರೋ!

2025ರ ಮೆಗಾ ಹರಾಜಿನಲ್ಲಿ ಟಿ ನಜರಾನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 10.75 ಕೋಟಿ ರೂಪಾಯಿಗೆ ಖರೀದಿಸಿತು. ನಟರಾಜನ್ ಈ ಸೀಸನ್​​ನಲ್ಲಿ ಖರೀದಿಯಾದ ದುಬಾರಿ ಬೌಲರ್​​​​ಗಳಲ್ಲಿ ಒಬ್ಬರು.

ದುಬಾರಿ ಬೌಲರ್​ ನಟರಾಜನ್ ಅವರು ಪ್ರಸಕ್ತ ಆವೃತ್ತಿಯಲ್ಲಿ ಆಡಿದ್ದು ಒಂದು ಪಂದ್ಯವನ್ನಷ್ಟೆ. ಅದರಲ್ಲೂ ಮೂರು ಓವರ್​​​ಗಳನ್ನಷ್ಟೇ ಎಸೆದರು. ಆದರೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಟರಾಜನ್ 3 ಓವರ್​​ಗಳಲ್ಲಿ 1 ವಿಕೆಟ್ ಪಡೆಯದೆ 49 ರನ್ ನೀಡಿದರು. ತಮ್ಮ ನಾಲ್ಕು ಓವರ್​​​ಗಳ ಕೋಟಾ ಪೂರ್ಣಗೊಳಿಸಲು ಅವಕಾಶ ನೀಡಿಲ್ಲ. ಕಳೆದ ವರ್ಷ 14 ಪಂದ್ಯಗಳಲ್ಲಿ 19 ವಿಕೆಟ್ ಉರುಳಿಸಿದ್ದರು.

ನಟರಾಜನ್ ಈವರೆಗೆ 63 ಐಪಿಎಲ್ ಪಂದ್ಯಗಳನ್ನು ಆಡಿದ್ದು...