ಭಾರತ, ಮೇ 4 -- ಕೆರಿಯರ್ ಗೈಡ್: ಭಾರತದ ಉದ್ದಗಲಕ್ಕೂ ಈಗ 10ನೇ ಮತ್ತು 12ನೇ ತರಗತಿ ಪ್ರಕಟವಾಗುತ್ತಿರುವ ಹೊತ್ತು. ವಿದ್ಯಾರ್ಥಿ ಜೀವನದ ಮಟ್ಟಿಗೆ ಇದು ನಿರ್ಣಾಯಕ ಕಾಲಘಟ್ಟವಾಗಿದ್ದು, 10ನೇ ಮತ್ತು 12ನೇ ತರಗತಿ ನಂತರ ಮುಂದೇನು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿರುತ್ತದೆ. ಕೆಲವರು ಈಗಾಗಲೇ ತಾವೇನಾಗಬೇಕು ಎಂದು ನಿರ್ಧರಿಸಿರುತ್ತಾರೆ. ಇನ್ನೂ ಹಲವರಿಗೆ ಗೊಂದಲ. ಪಿಯುಸಿ ಅಥವಾ 11 ಮತ್ತು 12ನೇ ತರಗತಿಯಲ್ಲಿ ಯಾವ ವಿಷಯ ಓದಿದರೆ ಮುಂದೆ ಯಾವೆಲ್ಲ ರೀತಿ ಉದ್ಯೋಗಾವಕಾಶ ಸಿಗಬಹುದು ಎಂಬ ಆತಂಕ. ಮಾತೆತ್ತಿದರೆ ಎಂಬಿಬಿಎಸ್, ಬಿಎಎಂಎಸ್‌, ಎಂಜಿನಿಯರಿಂಗ್ ಎಂದು ವಿದ್ಯಾರ್ಥಿಗಳು ಮತ್ತು ಪಾಲಕರು ಹೇಳುವುದನ್ನು ಕೇಳುತ್ತಿರುತ್ತೇವೆ. ಹಾಗಾದರೆ, ಉದ್ಯೋಗಾವಕಾಶ ಅಂದರೆ ಇಷ್ಟೇನಾ, ಈ ಮೂರು ಕ್ಷೇತ್ರ ಬಿಟ್ಟರೆ ಬೇರೆ ಉದ್ಯೋಗವೇ ಇಲ್ಲವೇ? ಎಂಬ ಕಳವಳವೂ ಅನೇಕರಲ್ಲಿದೆ. ಅಂತಹ ಕಳವಳ ಬೇಕಾಗಿಲ್ಲ. ಸೆಂಟ್ರಲ್ ಬೋರ್ಡ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಇದಕ್ಕಾಗಿಯೇ ಪೇರೆಂಟ್ಸ್ ಹ್ಯಾಂಡ್‌ಬುಕ್ ಕೆರಿಯರ್ಸ್ 2025 (Parents Handbook Ca...