Bengaluru, ಫೆಬ್ರವರಿ 21 -- ಕನ್ನಡ ಕಿರುತೆರೆಯ ಧಾರಾವಾಹಿಗಳ ಟಿಆರ್‌ಪಿ ಅಂಕಿ ಅಂಶ ಬಿಡುಗಡೆ ಆಗಿದೆ. ಆ ಪೈಕಿ ಟಾಪ್‌ 10ರಲ್ಲಿನ ಸೀರಿಯಲ್‌ಗಳ ವಿವರ ಇಲ್ಲಿದೆ.

ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಈ ಸಲವೂ ನಂಬರ್‌ 1 ಸ್ಥಾನದಲ್ಲಿ ಮುಂದುವರಿದಿದೆ. ಸತತ ನಾಲ್ಕನೇ ವಾರ ಅಗ್ರಸ್ಥಾನದಲ್ಲಿದೆ ಈ ಸೀರಿಯಲ್‌. 8.0 ಟಿಆರ್‌ಪಿ ಪಡೆದಿದೆ.

ಇತ್ತೀಚೆಗಷ್ಟೇ ಶುರುವಾದ ನಾ ನಿನ್ನ ಬಿಡಲಾರೆ ಸೀರಿಯಲ್‌ 7.8 ಟಿಆರ್‌ಪಿ ಪಡೆವ ಮೂಲಕ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಇನ್ನು ಲಕ್ಷ್ಮೀ ನಿವಾಸ ಸೀರಿಯಲ್‌ ಕೊಂಚ ಕುಸಿತ ಕಂಡಿದೆ. 7.6 ಟಿಆರ್‌ಪಿ ಪಡೆವ ಮೂಲಕ ಮೂರನೇ ಸ್ಥಾನದಲ್ಲಿದೆ.

ಅಣ್ಣಯ್ಯ ಸೀರಿಯಲ್‌ ಸಹ ಒಳ್ಳೆಯ ನಂಬರ್‌ ಪಡೆದಿದೆ. 7.4 ರೇಟಿಂಗ್‌ ಪಡೆದು, ನಾಲ್ಕನೇ ಸ್ಥಾನದಲ್ಲಿದೆ.

ಜೀ ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾದ ಅಮೃತಧಾರೆ ಸೀರಿಯಲ್‌ ಈ ಸಲ 6.5 ಟಿಆರ್‌ಪಿ ಪಡೆದು, ಐದನೇ ಸ್ಥಾನದಲ್ಲಿದೆ.

ಜೀ ಕನ್ನಡದಲ್ಲಿ ರಾತ್ರಿ 10ಗಂಟೆಗೆ ಪ್ರಸಾರವಾಗುವ ಬ್ರಹ್ಮಗಂಟು ಸೀರಿಯಲ್‌ 6.1 ಟಿಆರ್‌ಪಿ ಪಡೆದು ಆರನೇ ಸ್ಥಾನದಲ್ಲಿದ...