ಬೆಂಗಳೂರು, ಮಾರ್ಚ್ 28 -- ಡಾ ರೂಪಾ ರಾವ್‌ ಕಾಳಜಿ ಅಂಕಣ: ಪಿಯುಸಿ ಅಥವಾ ಎಸ್‌ಎಸ್‌ಎಲ್‌ಸಿ ಮುಗಿಯುತ್ತಿದ್ದ ಹಾಗೇ ಪೋಷಕರು ಮಾತುಗಳು ಹೀಗೆ ಶುರುವಾಗುತ್ತದೆ. "ನನ್ನ ಮಗಳು ಮ್ಯಾತ್ ಮೆಟಿಕ್ಸ್ ಚೆನ್ನಾಗಿ ಮಾಡುತ್ತಾಳೆ, ಅವರನ್ನ ಎಂಜಿನಿಯರಿಂಗ್ ಸೇರಿಸಬೇಕು. "ನನ್ನ ಮಗ ಸೈನ್ಸ್‌ನಲ್ಲಿ ಸೂಪರ್ ಅವನ್ನ ಡಾಕ್ಟರ್ ಮಾಡಬೇಕು." "ನನ್ನ ಮಗಳನ್ನ ಐಎಎಸ್ ಮಾಡಬೇಕು, ಐಪಿಎಸ್ ಸೇರಿಸಬೇಕು". ಎಲ್ಲಾ ಪೋಷಕರದ್ದೂ ಹೀಗೊಂದಷ್ಟು ಕನಸು. ತಮ್ಮ ಮಗ ಮಗಳು ಹೀಗೆ ಬೆಳೆಯಬೇಕು ಹೀಗೇ ಆಗಬೇಕು. ಇಷ್ಟು ಸಂಪಾದಿಸಬೇಕು ಎಂದಿರುತ್ತದೆ.

ಕನಸು ಕಾಣುವುದರಲ್ಲಿ ಯಾವ ತಪ್ಪು ಇಲ್ಲ ನಿಜ. ಆದರೆ, ಒಂದು ವಿಷಯ ಎಲ್ಲರೂ ನೆನಪಿಟ್ಟುಕೊಳ್ಳಬೇಕಾದದ್ದು ಮಕ್ಕಳು ನಮ್ಮ ಕನಸನ್ನು ನನಸು ಮಾಡಲು ಹುಟ್ಟಿರುವುದಲ್ಲ. ಅವರದ್ದೇ ಆಸೆ, ಆಸಕ್ತಿ, ಗುರಿ , ಇವುಗಳನ್ನು ಅಂತರ್ಗತವಾಗಿಯೇ ಹೊಂದಿದವರು. ಈ ಮಕ್ಕಳು ಭವಿಷ್ಯದ ಹೆಮ್ಮರವಾಗಿ ಬೆಳೆಯುವ ಸಂಪೂರ್ಣ ಮಾನವರು ಅಷ್ಟೇ .

ನನ್ನ ಆಪ್ತ ಸಮಾಲೋಚನೆಯ ಅನುಭವದಲ್ಲಿ "ತಂದೆ ತಾಯಿ ಚಿಕ್ಕಪ್ಪ ಕಸಿನ್ ಫ್ರೆಂಡ್ ಹೇಳಿದ ಕೋರ್ಸ್ ಅ...