ಭಾರತ, ಜುಲೈ 23 -- ಆರಂಭಿಕ 3 ಪಂದ್ಯಗಳ ಪೈಕಿ ಎರಡರಲ್ಲಿ ಜಯಿಸಿರುವ ಇಂಗ್ಲೆಂಡ್, ತವರಿನಲ್ಲಿ ಸರಣಿ ಗೆಲ್ಲುವ ಇರಾದೆಯಲ್ಲಿದೆ. ಅದಕ್ಕಾಗಿ 4ನೇ ಹಾಗೂ ಮ್ಯಾಂಚೆಸ್ಟರ್​​ ಟೆಸ್ಟ್​ ಪಂದ್ಯಕ್ಕೆ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಸ್ಪಿನ್ನರ್ ಶೋಯೆಬ್ ಬಷೀರ್ ಸ್ಥಾನಕ್ಕೆ ಲಿಯಾಮ್ ಡಾಸನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಈತ ಇಂಗ್ಲೆಂಡ್ ತಂಡವನ್ನು ಕೂಡಿಕೊಂಡಿದ್ದು 8 ವರ್ಷಗಳ ಬಳಿಕ. ಆದರೆ 8 ವರ್ಷಗಳ ಬಳಿಕ ಅವರನ್ನೇ ತಂಡಕ್ಕೆ ಸೇರಿಸಿಕೊಂಡಿದ್ದೇಕೆ, ಡಾಸನ್ ಹಿನ್ನೆಲೆ ಏನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂಗ್ಲೆಂಡ್​ನ ಸ್ಪಿನ್ ಬೌಲಿಂಗ್ ಆಲ್​ರೌಂಡರ್ ಲಿಯಾಮ್ ಡಾಸನ್ ಕೌಂಟಿ ಕ್ರಿಕೆಟ್​ನಲ್ಲಿ ಹ್ಯಾಂಪ್​ಶೈರ್ ತಂಡವನ್ನು ಪ್ರತಿನಿಧಿಸುತ್ತಾರೆ. ಅಗ್ರ ಕ್ರಮಾಂಕದ ಬ್ಯಾಟಿಂಗ್ ಆಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ನಿಧಾನಗತಿಯ ಎಡಗೈ ಸ್ಪಿನ್ನರ್​, ಕ್ರಮೇಣ ಬೌಲಿಂಗ್ ಕಡೆಗೆ ಒತ್ತು ನೀಡಿದರು. 35 ವರ್ಷದ ಆಲ್​ರೌಂಡರ್ 2016ರಲ್ಲಿ ಏಕದಿನ, ಟೆಸ್ಟ್​ ಮತ್ತು ಟಿ20 ಕ್ರಿಕೆಟ್​ಗೆ ...