ಭಾರತ, ಫೆಬ್ರವರಿ 28 -- ಅರ್ಜುನ ಪ್ರಶಸ್ತಿ ಪುರಸ್ಕೃತ ಬಾಕ್ಸರ್ ಸವೀಟಿ ಬೂರಾ ಅವರು ತಮ್ಮ ಪತಿ ದೀಪಕ್ ಹೂಡಾ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ವೃತ್ತಿಪರ ಕಬ್ಬಡಿ ಆಟಗಾರ ದೀಪಕ್ ಹಾಗೂ ಅವರ ಕುಟುಂಬ ಸದಸ್ಯರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸವೀಟಿ ಮತ್ತು ದೀಪಕ್ 2022ರಲ್ಲಿ ವಿವಾಹವಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ದೀಪಕ್, ನನ್ನ ಪತ್ನಿ ವಿರುದ್ಧ ಯಾವುದೇ ನೆಗೆಟಿವ್ ಹೇಳಿಕೆ ನೀಡುವುದಿಲ್ಲ. ಆಕೆಯನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಹಾಗಾಗಿ ಪ್ರಕರಣಕ್ಕೆ ಮತ್ತೊಂದು ದಿನಾಂಕ ನೀಡಬೇಕೆಂದು ನ್ಯಾಯಾಲಯ ಕೋರಿರುವುದಾಗಿ ಹೇಳಿದ ದೀಪಕ್, ನಾನು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿದ್ದೇನೆ. ನಂತರದ ದಿನಾಂಕವನ್ನು ಕೋರಿದ್ದೇನೆ. ನಾನು ಖಂಡಿತವಾಗಿಯೂ ಅಲ್ಲಿಗೆ (ಪೊಲೀಸ್ ಠಾಣೆಗೆ) ಹೋಗುತ್ತೇನೆ. ಆದರೆ ನನ್...