Bengaluru, ಫೆಬ್ರವರಿ 26 -- Bamboo farming profit per acre: 2017ನೆಯ ಇಸವಿಯಲ್ಲಿ ಭಾರತೀಯ ಅರಣ್ಯ ಕಾನೂನಿಗೆ ತಿದ್ದುಪಡಿ ಮಾಡಲಾಗಿದ್ದು ಅದರ ಪ್ರಕಾರ ಬಿದಿರು ಒಂದು ಹುಲ್ಲಿನ ಜಾತಿಯ ಸಸ್ಯ ಎಂದು ಘೋಷಿಸಲಾಗಿದೆ. ಇದು ರಾಜ್ಯದಲ್ಲಿ ಬಿದಿರುವ ಕೃಷಿಗೆ ಉತ್ತೇಜನ ನೀಡಿದೆ. ಸಾಕಷ್ಟು ರೈತರು ಬಿದಿರು ಕೃಷಿ ಮೂಲಕ ನಿರಂತರ ಆದಾಯ ಪಡೆಯುತ್ತಿದ್ದಾರೆ. ಇತ್ತೀಚೆಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಬಿದಿರು ಕೃಷಿಗೆ ಸಂಬಂಧಪಟ್ಟಂತೆ ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ನಿರ್ದೇಶಕರನ್ನು ಸಂದರ್ಶನ ಮಾಡಿತ್ತು. (ಸಂದರ್ಶನದ ಲಿಂಕ್‌ ಇಲ್ಲಿದೆ) ಈ ಲೇಖನದಲ್ಲಿ ಬಿದಿರುವ ಕೃಷಿಯ ಕುರಿತು ಇನ್ನಷ್ಟು ವಿವರ ಪಡೆಯೋಣ.

ಬಿದಿರಿನಿಂದ ನಿರಂತರ ಆದಾಯ: ಬಿದಿರು ಕೃಷಿ ಅನ್ನುವುದು ಪ್ರಾಯಶಃ ತಪ್ಪಾಗಬಹುದೇನೋ. ಯಾಕೆಂದರೆ ಬಿದಿರು ಒಮ್ಮೆ ನಟ್ಟು ಮರೆತು ಬಿಡಬಹುದಾದ ಒಂದು ಬೆಳೆ. ಇದಕ್ಕೆ ಯಾವುದೇ ಗೊಬ್ಬರ, ನೀರಾವರಿ ಅಗತ್ಯವಿಲ್ಲ, ಕಾರ್ಮಿಕರ ಅವಲಂಬನೆ ಇಲ್ಲ ಎಂದು ಗ್ರಾಮಜನ್ಯದ ನಿರ್ದೇಶಕರಾದ ರಾಮಪ್ರತೀಕ್‌ ಕರಿಯಾಲ ಹೇಳಿದ್ದಾರೆ.

ಪರ್ಯಾ...