Bengaluru, ಫೆಬ್ರವರಿ 27 -- Puneeth Rajkumar 50th Birthday: ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇಲ್ಲವಾಗಿ ಮೂರು ವರ್ಷಗಳಾದವು. ಇಂದಿಗೂ ಅವರಿಲ್ಲ ಅನ್ನೋ ಭಾವ ಯಾರಲ್ಲೂ ಇಲ್ಲ. ಸಿನಿಮಾ ಮೂಲಕ, ಹಾಡು, ಡೈಲಾಗ್‌ಗಳ ಮೂಲಕ ಪ್ರತಿ ಮನೆ ಮನಗಳಲ್ಲೂ ಅಪ್ಪು ನೆಲೆಸಿದ್ದಾರೆ. ಜೊತೆಗಿರದ ಜೀವ ಸದಾ ಜೀವಂತ ಎಂಬಂತೆ, ಅಭಿಮಾನಿಗಳ ಹೃದಯದಲ್ಲಿ ಅಜರಾಮರವಾಗಿದ್ದಾರೆ. ಇದೀಗ ಮಾರ್ಚ್‌ ತಿಂಗಳು ಬಂತು. ಒಂದು ವೇಳೆ ಪುನೀತ್‌ ರಾಜ್‌ಕುಮಾರ್‌ ಬದುಕಿದ್ದಿದ್ದರೆ, ಮಾರ್ಚ್‌ 17ಕ್ಕೆ 50ನೇ ವರ್ಷದ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದರು. ಈ ಬರ್ತ್‌ಡೇಗೆ ಅಪ್ಪು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡುತ್ತಿದ್ದಾರೆ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್.‌

ಮಾರ್ಚ್‌ 17ರಂದು ಪುನೀತ್‌ ರಾಜ್‌ಕುಮಾರ್‌ ಅವರ ಜಯಂತಿ. ಅಪ್ಪು ಬದುಕಿದ್ದಿದ್ದರೆ ಅದ್ಧೂರಿಯಾಗಿ 50ನೇ ವರ್ಷದ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದರು. ಹತ್ತು ಹಲವು ಸರ್ಪ್ರೈಸ್‌ಗಳನ್ನು ನೀಡುತ್ತಿದ್ದರು. ಇದೀಗ ಅವರ ಅನುಪಸ್ಥಿತಿಯಲ್ಲಿಯೇ ಆ ಕೆಲಸವನ್ನು...