Bengaluru, ಫೆಬ್ರವರಿ 13 -- ಮಂಗಳೂರು: ನಿನ್ನೆ ಮತ್ತು ನಾಳೆಯನ್ನು ಮರೆತು ಇಂದಿನದು ಇಂದಿಗೆ ಎಂದು ಸಂತಸ ಪಡುವವನೇ ಈ ಜಗತ್ತಿನ ಶೇಷ್ಠ ಸುಖ ಜೀವಿ ಎಂದು ಸುಕ್ರಿ ಅಜ್ಜಿ ಇಷ್ಟು ಹೇಳಿದ್ದು ಮಾತ್ರವಲ್ಲ ಸ್ವತಃ ಅವರೇ ಈ ರೀತಿ ಬದುಕಿ ಇತರರಿಗೂ ಮಾದರಿಯಾಗಿದ್ದಾರೆ. 'ಹಣವೇ ಬದುಕಲ್ಲ, ಗುಣವೇ ಬದುಕಿನ ಶ್ರೇಷ್ಠ ಸಂಪತ್ತು, ಹಣದ ಅಭಿಲಾಷೆ ಹೆಚ್ಚಾದಷ್ಟೂ ಹೆಣದ ವಾಸನೆ ಬರುತ್ತದೆ ' ಎಂದು ಸುಕ್ರಜ್ಜಿ ಸದಾ ಹೇಳುತ್ತಿದ್ದರು ಎಂದು ನೆನಪಿಸಿಕೊಂಡವರು ಖ್ಯಾತ ಪರಿಸರವಾದಿ ಹಾಗೂ ಪದ್ಮಶ್ರೀ ಸುಕ್ರಿ ಬೊಮ್ಮ ಗೌಡರ ನಿಕಟವರ್ತಿಗಳಲ್ಲಿ ಓರ್ವರಾದ ದಿನೇಶ್ ಹೊಳ್ಳ.

ಅವರ ನಿಧನದ ಕುರಿತು ಸಂತಾಪ ಸೂಚಿಸಿದ ಹೊಳ್ಳರು, ಕೆಲ ದಿನಗಳ ಹಿಂದೆ ಮಂಗಳೂರಿಗೆ ಬಂದು ವೈದ್ಯರನ್ನು ಸುಕ್ರಜ್ಜಿ ಸಂಪರ್ಕಿಸಿ ಹೋಗಿದ್ದರು. ಆಗಲೇ ಮುಖ ಡಲ್ ಆಗಿತ್ತು. ಅವರಂಥವರು ನಮಗೆ ದೊರಕುವುದು ವಿರಳ. ಅನರ್ಘ್ಯ ರತ್ನವೊಂದನ್ನು ನಾವು ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದರು.

ಸುಕ್ರಜ್ಜಿಗೆ ಹಣ ಮಾಡುವುದಿದ್ದರೆ ಎಷ್ಟೂ ಹಣ ಮಾಡಬಹುದಿತ್ತು. ಅಂತಹ ಅವಕಾಶಗಳು ಕೂಡಾ ಸಾಕ...