ಭಾರತ, ಮೇ 27 -- ಕಲಿಯುವ ಆಸಕ್ತಿ ಇರುವವರು ಹೇಗಾದರೂ ಕಲಿಯಬಹುದು. ದುಬಾರಿ ಶುಲ್ಕ ಪಾವತಿಸಿ ಪ್ರಮುಖ ಕೋರ್ಸ್‌ ಮಾಡಬೇಕೆಂದೇನೂ ಇಲ್ಲ. ಹಲವು ಕೋರ್ಸ್‌ಗಳನ್ನು ಉಚಿತವಾಗಿ, ಪ್ರಮಾಣಪತ್ರದೊಂದಿಗೆ ಮುಗಿಸಬಹುದು. ಅದರಲ್ಲೂ ಮನೆಯಲ್ಲೇ ಕುಳಿತು ಆನ್‌ಲೈನ್‌ ಮೂಲಕ ಪ್ರಮುಖ ವೃತ್ತಿಪರ ಕೋರ್ಸ್‌ಗಳನ್ನು ಕಲಿಯಬಹುದು. ಭಾರತ ಸರ್ಕಾರವೇ ಉಚಿತ ಕೋರ್ಸ್‌ಗಳನ್ನು ನೀಡುತ್ತಿದೆ. ಅದುವೇ 'ಸ್ವಯಂ' (SWAYAM). ಇದು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಹಲವು ಶೈಕ್ಷಣಿಕ ಕೋರ್ಸ್‌ಗಳನ್ನು ಒದಗಿಸುವ ಭಾರತ ಸರ್ಕಾರದ ಉಚಿತ ಆನ್‌ಲೈನ್ ಕೋರ್ಸ್‌ಗಳ ಪೋರ್ಟಲ್ ಆಗಿದೆ. ಇದರ ಕುರಿತು ಹಲವರಿಗೆ ತಿಳಿದಿರುವುದಿಲ್ಲ. ಅಂಥವರಿಗಾಗಿ ಈ ಮಾಹಿತಿ.

ಸ್ವಯಂ (SWAYAM) ಎಂಬ ಸಂಸ್ಕೃತ ಪದದ ಇಂಗ್ಲೀಷ್‌ ಪೂರ್ಣ ರೂಪವೇ Study Webs of Active-learning for Young Aspiring Minds. ಅಂದರೆ, ಯುವ ಮಹತ್ವಾಕಾಂಕ್ಷಿ ಮನಸ್ಸುಗಳಿಗಾಗಿ ಸಕ್ರಿಯ ಕಲಿಕೆಯ ಅಧ್ಯಯನ ಜಾಲಗಳು ಎಂದು ಅರ್ಥ.

2017ರ ಜುಲೈ 9ರಂದು ಭಾರತದ ಆಗಿನ ರಾಷ್...