Bengaluru, ಫೆಬ್ರವರಿ 25 -- Crazy Star Ravichandran: ಕ್ರೇಜಿಸ್ಟಾರ್‌ ರವಿಚಂದ್ರನ್‌, ಚಂದನವನದ ಸೂಪರ್‌ಸ್ಟಾರ್‌. ತಮ್ಮ ಸಿನಿಮಾಗಳ ಮೂಲಕವೇ ಕರುನಾಡಿನ ಮನೆ ಮನಗಳಲ್ಲಿಯೂ ಇಂದಿಗೂ ಹಸಿರಾಗಿಯೇ ಉಳಿದಿದ್ದಾರೆ. ಇಂದಿಗೂ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್‌ ಸಿನಿಮಾಗಳಲ್ಲಿ ಅವರ ಸಿನಿಮಾಗಳ ಪಾಲೂ ಹೆಚ್ಚು. ತಮ್ಮ ಸಿನಿಮಾಗಳ ಮೂಲಕ ಪ್ರಯೋಗಕ್ಕೆ ಒಡ್ಡಿಕೊಂಡ ರವಿಚಂದ್ರನ್‌, ಮೊದಲ ಸಿನಿಮಾ ಪ್ರೇಮಲೋಕದಲ್ಲಿ 11 ಹಾಡುಗಳ ಮೂಲಕ ಮೋಡಿ ಮಾಡಿದ್ದರು. ಹಂಸಲೇಖ ಸಂಗೀತದ ಜತೆಗೆ ಸಾಹಿತ್ಯ ಬರೆದು ಎಲ್ಲರನ್ನೂ ಕುಣಿಸಿದ್ದರು. ಪ್ಯಾನ್‌ ಇಂಡಿಯಾ ಪರಿಕಲ್ಪನೆಯೂ ಪ್ರೇಮಲೋಕ ಚಿತ್ರದಿಂದಲೇ ಶುರುವಾಗಿತ್ತು. ಇದೀಗ ಇದೇ ರವಿಚಂದ್ರನ್‌, ಪ್ಯಾನ್‌ ಇಂಡಿಯಾ ಸಿನಿಮಾಗಳು ಮತ್ತು ತೆಲುಗು, ತಮಿಳು, ಮಲಯಾಳಂ ಇಂಡಸ್ಟ್ರಿಯಲ್ಲಿನ ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

ನಟ ರವಿಚಂದ್ರನ್‌ ಇದೀಗ "ಪ್ಯಾರ್"‌ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ತಮ್ಮ ಪ್ರೇಮಲೋಕ 2 ಚಿತ್ರದ ಬಗ್ಗೆಯೂ ರವಿಚಂದ್ರನ್‌ ಮಾ...