ಭಾರತ, ಮೇ 7 -- ಧೀರೇನ್ ರಾಮ್‍ಕುಮಾರ್ ಅಭಿನಯದಲ್ಲಿ ಒಂದು ಚಿತ್ರ ನಿರ್ಮಿಸುತ್ತಿರುವುದಾಗಿ ಶಿವರಾಜಕುಮಾರ್ ಮತ್ತು ಗೀತಾ ಶಿವ ರಾಜಕುಮಾರ್, ಡಿಸೆಂಬರ್ 06ರಂದು ಘೋಷಿಸಿದ್ದರು. ಅಂದೇ ಘೋಷಿಸುವುದಕ್ಕೆ ಕಾರಣವೂ ಇದೆ. ಅಂದು ಪಾರ್ವತಮ್ಮ ರಾಜಕುಮಾರ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ತಮ್ಮ ಸೋದರಳಿಯನ ಅಭಿನಯದಲ್ಲಿ ಚಿತ್ರ ಘೋಷಿಸಿದ್ದರು. ಈಗ ಆ ಚಿತ್ರಕ್ಕೆ 'ಪಬ್ಬಾರ್' ಎಂದು ಹೆಸರಿಡಲಾಗಿದ್ದು, ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ಮಹಾಲಕ್ಷ್ಮೀ ಲೇಔಟ್‍ನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿದೆ.
ಈ ಮುಹೂರ್ತದಲ್ಲಿ ಶಿವರಾಜಕುಮಾರ್, ಗೀತಾ ಶಿವ ರಾಜಕುಮಾರ್, ರಾಮ್‍ಕುಮಾರ್, ಪೂರ್ಣಿಮಾ ರಾಮ್‍ಕುಮಾರ್, ನಾಗಶೇಖರ್, ಶ್ರೀನಗರ ಕಿಟ್ಟಿ ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜಕುಮಾರ್, 'ಬೇರೆ ಭಾಷೆಗಳ ಜೊತೆಗೆ ಸ್ಪರ್ಧಿಸಬೇಕು ಎಂದರೆ, ಹೊಸ ತರಹದ ಚಿತ್ರಗಳು ಬರಬೇಕು. ಪ್ರಯತ್ನವೇ ಮಾಡದಿದ್ದರೆ ಹೇಗೆ? ನಾನು 40 ವರ್ಷದಿಂದ ಚಿತ್ರಗಳನ್ನು ಮಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.