ಭಾರತ, ಮಾರ್ಚ್ 16 -- ರವಿಚಂದ್ರನ್‍ ಅವರ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲೊಂದು 'ಶಾಂತಿ ಕ್ರಾಂತಿ'. ಅದಕ್ಕೂ ಮುನ್ನ ಇಡೀ ಭಾರತೀಯ ಚಿತ್ರರಂಗದಲ್ಲೇ ಅಂಥದ್ದೊಂದು ಪ್ರಯೋಗ ಆಗಿರಲಿಲ್ಲ. ಈ ಚಿತ್ರವನ್ನು ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ತಯಾರಿಸಿದ್ದರು ರವಿಚಂದ್ರನ್. ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ಕ್ರಾಂತಿ ಪಾತ್ರವನ್ನು ರಜನಿಕಾಂತ್‍ ಮತ್ತು ನಾಗಾರ್ಜುನ ಮಾಡಿದರೆ, ಕನ್ನಡದಲ್ಲಿ ರವಿಚಂದ್ರನ್‍ ಅವರೇ ಮಾಡಿದ್ದರು. ಬಹಳ ಕಷ್ಟಪಟ್ಟು, ಕೋಟ್ಯಂತರ ರೂಪಾಯಿ ಹಾಕಿ ಮಾಡಿದ ಈ ಚಿತ್ರ ಗೆಲ್ಲಲಿಲ್ಲ.

ಆದರೆ, ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಈ ಚಿತ್ರ ರವಿಚಂದ್ರನ್‍ ಅವರಿಗೆ ಸಾಕಷ್ಟು ನಷ್ಟ ತಂದುಕೊಟ್ಟಿತ್ತು. ಅದನ್ನೆಲ್ಲಾ ತೀರಿಸುವುದಕ್ಕೆ ಸ್ವಲ್ಪ ಸಮಯವೇ ಬೇಕಾಯಿತು. ಈ ಚಿತ್ರ ಮಾಡುವಾಗಲೇ ಇದು ಗೆಲ್ಲುವುದಿಲ್ಲ ಎಂದು ರವಿಚಂದ್ರನ್‍ ಅವರಿಗೆ ಗೊತ್ತಿತ್ತಂತೆ. ಆದರೆ, ಚಿತ್ರವನ್ನು ಮುಂದುವರೆಸುವುದಕ್ಕೆ ಅವರಿಗೆ ಕಾರಣವಿತ್ತು. ಆ ಕಾರಣವೇನೆಂ...