ಭಾರತ, ಏಪ್ರಿಲ್ 30 -- ಉಪೇಂದ್ರ ಅಭಿನಯದಲ್ಲಿ ಹಿರಿಯ ನಿರ್ದೇಶಕ ನಾಗಣ್ಣ ಒಂದು ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿಯೊಂದು ಯುಗಾದಿ ಹಬ್ಬದಂದು ಕೇಳಿಬಂದಿತ್ತು. 'ಸೂರಪ್ಪ' ಬಾಬು ನಿರ್ಮಾಣದ ಈ ಚಿತ್ರದ ಶೀರ್ಷಿಕೆ ಅನಾವರಣ, ಅಕ್ಷಯ ತೃತೀಯ ಹಬ್ಬದ ಪ್ರಯುಕ್ತ ಆಗಲಿದೆ ಎಂದು ಬಾಬು ಹೇಳಿದ್ದರು.

ಈಗ ಕೊನೆಗೂ ಶೀರ್ಷಿಕೆ ಅನಾವರಣವಾಗಿದ್ದು, ಚಿತ್ರಕ್ಕೆ 'ಭಾರ್ಗವ' ಎಂದು ಹೆಸರಿಡಲಾಗಿದೆ. 'ಭಾರ್ಗವ' ಎಂದರೆ, ವಿಷ್ಣುವಿನ ಆರನೇ ಅವತಾರ, ಪರಶುರಾಮನೆಂದು ನಂಬಲಾಗುತ್ತದೆ. ಈ ಅವತಾರಕ್ಕೂ, ಉಪೇಂದ್ರ ಅವರ ಪಾತ್ರಕ್ಕೂ ಏನಾದರೂ ಸಂಬಂಧವಿದೆಯಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

ಉಪೇಂದ್ರ ಮತ್ತು ನಾಗಣ್ಣ ಇದಕ್ಕೂ ಮೊದಲು 'ಕುಟುಂಬ', 'ಗೋಕರ್ಣ', 'ಗೌರಮ್ಮ' ಮತ್ತು 'ದುಬೈ ಬಾಬು' ಚಿತ್ರಗಳನ್ನು ಜೊತೆಯಾಗಿ ಮಾಡಿದ್ದರು. 'ದುಬೈ ಬಾಬು' ನಂತರ ಉಪೇಂದ್ರ ಅಭಿನಯದಲ್ಲಿ ನಾಗಣ್ಣ ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಆಗಾಗ ಕೇಳಿ ಬರುತ್ತಿತ್ತಾದರೂ, ಅದು ಸಾಧ್ಯವಾಗಿರಲಿಲ್ಲ. ಈಗ ಇಬ್ಬರನ್ನೂ ಜೊತೆಯಾಗಿಸುತ್ತಿದ್ದಾ...