ಭಾರತ, ಏಪ್ರಿಲ್ 28 -- ಮೇಜರ್​ ಧ್ಯಾನ್ ಚಂದ್.. ಭಾರತದ ಹಾಕಿ ದಿಗ್ಗಜ. ಇವರು ಹುಟ್ಟಿದ್ದು ಆಗಸ್ಟ್​ 29ರಂದು. ಹಾಕಿ ಮಾಂತ್ರಿಕನ ಜನ್ಮದಿನದ ನೆನಪಿನಾರ್ಥವಾಗಿ ಆ ದಿನವನ್ನು 'ರಾಷ್ಟ್ರೀಯ ಕ್ರೀಡಾ ದಿನಾಚರಣೆ' ಎಂದು ಆಚರಣೆ ಮಾಡಲಾಗುತ್ತದೆ. ವಿಶ್ವಶ್ರೇಷ್ಠ ಕ್ರೀಡಾಪಟುವಾಗಿದ್ದ ಧ್ಯಾನ್ ಚಂದ್​ನನ್ನು ಸರಿಗಟ್ಟುವ ಆಟಗಾರ ಇಂದಿಗೂ ಯಾರೂ ಇಲ್ಲ. 1905ರ ಆಗಸ್ಟ್​ 29ರಂದು ಅಹ್ಮದಾಬಾದ್​​ನಲ್ಲಿ ಜನಿಸಿದ ಈತನಿಗೆ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್​​ ಜರ್ಮನ್​ ಪೌರತ್ವ ನೀಡಲು ಮುಂದಾಗಿದ್ದರು! ಏಕೆ?

1928, 1932 ಹಾಗೂ 1936ರ ಒಲಿಂಪಿಕ್​ಗಳಲ್ಲಿ ಭಾರತಕ್ಕೆ ಸತತ ಮೂರು ಹಾಕಿ ಚಿನ್ನದ ಪದಕಗಳನ್ನು ಗೆದ್ದುಕೊಟ್ಟಿದ್ದ ಈತನ ಆಟಕ್ಕೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್​​ ಅವರೇ ಬೆರಗುಗೊಂಡಿದ್ದರು. ಪ್ರೀತಿಯಿಂದ ಎಲ್ಲರಿಂದ ದಾದಾ ಎಂದು ಕರೆಸಿಕೊಳ್ಳುತ್ತಿದ್ದ ಧ್ಯಾನ್ ಚಂದ್​ಗೆ 1956ರಲ್ಲಿ ಭಾರತ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರು ಅಂತಾರಾಷ್ಟ್ರೀಯ ಹಾಕಿಯಲ್ಲಿ 400ಕ್ಕೂ ಅಧಿಕ ಗೋಲು ಸಿಡಿಸಿದ್ದಾರೆ. ಇದೊಂದು...