ಭಾರತ, ಏಪ್ರಿಲ್ 13 -- ಬೆಂಗಳೂರು: ಬೆಂಗಳೂರು ಕರ್ಮ ಭೂಮಿ ಸಾಕಷ್ಟು ಜನ ಬೆಂಗಳೂರಿಗೆ ಕೆಲಸ ಮಾಡಿ ಹಣ ಸಂಪಾಧನೆ ಮಾಡುವ ಒಂದೇ ಒಂದು ಉದ್ದೇಶದಿಂದ ಬಂದಿರುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲಸವೇ ಜೀವನ ಎಂಬ ಪರಿಸ್ಥಿತಿ ನಿರ್ಮಾಣವಾಗಿ, ಎಲ್ಲರಿಯೂ ಒತ್ತಡ ಮನೆ ಮಾಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಮೀಮ್‌ಗಳು ಶೇರ್ ಆಗುತ್ತವೆ ಅಷ್ಟೇ ಅಲ್ಲ ಆಗಾಗ ಈ ವಿಷಯ ತುಂಬಾ ಚರ್ಚೆಯಾಗುತ್ತಾ ಇರುತ್ತದೆ. ಈ ಬಾರಿಯೂ ಅದೇ ರೀತಿ ಇನ್ನೊಂದು ಫೋಟೋ ವೈರಲ್ ಆಗಿದ್ದು ತುಂಬಾ ಚರ್ಚೆಯಾಗುತ್ತಿದೆ. 'ಫ್ರಸ್ಟೇಟೆಡ್ ಎಂಜಿನಿಯರ್ಸ್ ಚಾಯ್ ಪಾಯಿಂಟ್' ಎಂಬ ಎಂಬ ವೈರಲ್ ಟೀ ಸ್ಟಾಲ್ ಬೋರ್ಡ್ ಈ ಚರ್ಚೆಗೆ ಕಾರಣವಾಗಿದೆ.

'ಫ್ರಸ್ಟೇಟೆಡ್ ಎಂಜಿನಿಯರ್ಸ್ ಚಾಯ್ ಪಾಯಿಂಟ್' ಎಂಬ ಟೀ ಸ್ಟಾಲ್‌ನ ಫೋಟೋ ವೈರಲ್ ಆಗುತ್ತಿದೆ. ಬೆಂಗಳೂರಿನ ಹೆಚ್ಚಿನ ಒತ್ತಡದ ಕೆಲಸದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಸ್ಯಮಯವಾಗಿ ಇದನ್ನು ತೆಗೆದುಕೊಂಡರೂ ಈ ಅಂಶ ಸತ್ಯವೇ ಆಗಿದೆ. ಐಟಿ ಪಾರ್ಕ್‌ಗಳು ಮತ್ತು ಸ್ಟಾ...