Bengaluru, ಮಾರ್ಚ್ 13 -- Sumalatha Ambareesh on Darshan: ನಟ ದರ್ಶನ್‌ ಮತ್ತು ಸುಮಲತಾ ಅಂಬರೀಶ್‌ ನಡುವೆ ಯಾವುದೂ ಸರಿಯಿಲ್ವಾ? ಹೀಗೊಂದು ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ನಟ ದರ್ಶನ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಈ ವರೆಗೂ ಫಾಲೋ ಮಾಡುತ್ತಿದ್ದ ಎಲ್ಲರನ್ನೂ ಅನ್‌ ಫಾಲೋ ಮಾಡಿ, ಶೂನ್ಯ ಫಾಲೋವರ್ಸ್‌ ನೀತಿ ಅನುಸರಿಸುತ್ತಿದ್ದಾರೆ. ಹೀಗಿರುವಾಗಲೇ, ಇತ್ತ ಇನ್ನೊಂದು ಬದಿಯಲ್ಲಿ ಸುಮಲತಾ ಅಂಬರೀಶ್‌, ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ಸ್ಟೋರಿಗಳನ್ನು ಹಂಚಿಕೊಂಡಿದ್ದರು. ಇದೆಲ್ಲದರ ಬೆನ್ನಲ್ಲೇ, ಜಾಲತಾಣದಲ್ಲಿ ಬೇರೆಯದೇ ಚರ್ಚೆ ಶುರುವಾಗಿತ್ತು. ಆ ಚರ್ಚೆಗೆ ತೆರೆ ಎಳೆಯುವ ಸಲುವಾಗಿ ಸುದೀರ್ಘ ಬರಹದ ಮೂಲಕ ಸ್ಪಷ್ಟನೆ ನೀಡಿದ್ದರು ಸುಮಲತಾ ಅಂಬರೀಶ್‌.

ನಟ ದರ್ಶನ್‌ ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲರನ್ನೂ ಅನ್‌ಫಾಲೋ ಮಾಡುತ್ತಿದ್ದಂತೆ, ಮತ್ತೊಂದು ಕಡೆ ಸುಮಲತಾ ಅಂಬರೀಶ್‌ ಒಂದಷ್ಟು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದರು. ಅದು ನೇರವಾಗಿ ದರ್ಶನ್‌ ಅವರಿಗೇ ಇರಬಹುದಾ ಎಂದೂ ಕೆಲವರು ಊಹಿಸಿದ್ದರು....