Bengaluru, ಫೆಬ್ರವರಿ 25 -- Actor Jaggesh: ಸ್ಯಾಂಡಲ್‌ವುಡ್‌ನ ಹಿರಿಯ ನಟ ಜಗ್ಗೇಶ್‌, ಇತ್ತೀಚೆಗಷ್ಟೇ ಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಿ ಮರಳಿದ್ದಾರೆ. ಹೀಗೆ ಪ್ರಯಾಗರಾಜ್‌ನ ಕುಂಭಕ್ಕೆ ಹೋದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿಯೂ ಬಗೆಬಗೆ ಕಾಮೆಂಟ್‌ಗಳು ಅವರಿಗೆ ಸಂದಾಯವಾಗಿವೆ, ಅವೆಲ್ಲವನ್ನು ಗಮನಿಸಿದ ಜಗ್ಗೇಶ್‌, ಆ ಕಾಮೆಂಟ್‌ಗಳಿಗೆ ಉತ್ತರ ನೀಡಿದ್ದಾರೆ. "ನಿಮಗೇನು ದುಡ್ಡಿದೆ, ಹೋಗಿ ಬಂದ್ರಿ" ಎಂದವರಿಗೆ ಇದೆಲ್ಲ ರಾಘವೇಂದ್ರ ಸ್ವಾಮಿಗಳಿಂದ ಆಗಿದ್ದು ಎಂದಿದ್ದಾರೆ. ಈ ಬಗ್ಗೆ ಸುದೀರ್ಘ ಪೋಸ್ಟ್‌ ಹಂಚಿಕೊಂಡಿದ್ದಾರೆ.

ದಯವಿಟ್ಟು ಓದಿ ಒಂದು ದಿನ ಇದ್ದದ್ದು ಮತ್ತೊಂದು ದಿನ ಇಲ್ಲವಾಗುವುದು ನಶ್ವರ ಜಗತ್ತು...

ಅರ್ಥಾತ್ ಇಂದು ಇದ್ದವ ನಾಳೆ ಇರನು!

ಇರುವ ಇರನು ಅಂತರದಲ್ಲಿ ದೇವರ ಅಸ್ಥಿತ್ವ ಪ್ರಧಾನ !

ಇದ್ದಾಗ ಶಿವ ಹೋದಾಗ ಶವ!

ಇಷ್ಟು ಮನುಷ್ಯನಿಗೆ ಆಳದಲ್ಲಿ ಅರಿವಾದರೆ ಅವನ "ನಾನು" ಅರ್ಥ ಕಳೆದುಕೊಂಡು "ನೀನು" ಉಳಿದು ಬಿಡುತ್ತದೆ ಆ "ನೀನು" ಪರಬ್ರಹ್ಮ ಸ್ವರೂಪ ಅಂದರೆ ದೇವರು

ನನ್ನ ಇತ್ತೀಚಿನ ಕುಂಭಮೇಳಕ್ಕೆ ...