Bengaluru, ಫೆಬ್ರವರಿ 26 -- Bollywood Actor Govinda: ಸೋಷಿಯಲ್‌ ಮೀಡಿಯಾದಲ್ಲಿ ಗೋವಿಂದ ಮತ್ತು ಸುನೀತಾ ಅಹುಜಾ ಜೋಡಿಯ ನಡುವೆ ಯಾವುದೂ ಸರಿಯಿಲ್ಲ. ಇನ್ನೇನು ಶೀಘ್ರದಲ್ಲಿ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಹೀಗೀರುವಾಗಲೇ ಪತ್ನಿ ಸುನೀತಾ ಅವರೊಂದಿಗೆ ವಿಚ್ಛೇದನದ ವದಂತಿಗಳ ಬಗ್ಗೆ ನಟ ಗೋವಿಂದ ಮೌನ ಮುರಿದಿದ್ದಾರೆ. ವಿಚ್ಛೇದನದ ಬಗ್ಗೆ ಮಾತನಾಡದೆ, ಪರೋಕ್ಷವಾಗಿ ಬ್ಯಾಟ್‌ ಬೀಸಿದ್ದಾರೆ.

ಗೋವಿಂದ ಅವರ ಸೋದರ ಸೊಸೆ ಆರತಿ ಸಿಂಗ್ ಈ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವದಂತಿಗಳು 'ಆಧಾರರಹಿತ' ಎಂದು ಕರೆದಿದ್ದಾರೆ. ಗೋವಿಂದ ಮತ್ತು ಸುನೀತಾ ನಡುವೆ ಒಳ್ಳೆಯ ಬಾಂಧವ್ಯವಿದೆ ಎಂದಿದ್ದಾರೆ. ಈ ಬಗ್ಗೆ ನ್ಯೂಸ್‌ 18 ಜತೆಗೆ ಮಾತನಾಡಿದ ಅವರು, "ನಾನೀಗ ಮುಂಬೈನಲ್ಲಿಲ್ಲ. ನಾನು ಯಾರೊಂದಿಗೂ ಸಂಪರ್ಕದಲ್ಲಿಲ್ಲ. ಆದರೆ ನಾನು ನಿಮಗೆ ಒಂದು ವಿಷಯ ಹೇಳುತ್ತೇನೆ, ಇದು ಸುಳ್ಳು ಸುದ್ದಿ" ಎಂದಿದ್ದಾರೆ ಆರತಿ ಸಿಂಗ್.‌

ಇದನ್ನೂ ಓದಿ: ಅಪ್ಪು ಹೆಸರಲ್ಲಿ ಮತ್ತೊಂದು ಮಹತ್ಕಾರ್ಯ; ಅಶ್ವಿನಿ ಪುನೀತ್‌ ರ...