Bengaluru, ಫೆಬ್ರವರಿ 10 -- Kuladalli Keelyavudo Song: ಸ್ಯಾಂಡಲ್‌ವುಡ್‌ ವಿಕಟ ಕವಿ ಯೋಗರಾಜ್‌ ಭಟ್‌ ಬರೀ ಸಿನಿಮಾ ನಿರ್ದೇಶನದಿಂದಷ್ಟೇ ಅಲ್ಲ, ಹಾಡುಗಳಿಗೆ ಸಾಹಿತ್ಯ ಬರೆಯುವ ಮೂಲಕವೂ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಹಾಡುಗಳ ಸಾಹಿತ್ಯದಲ್ಲಿ ಯಾರೂ ಮಾಡದ ಒಂದಷ್ಟು ಪ್ರಯೋಗಗಳನ್ನು ಮಾಡಿದ್ದಾರವರು. ಇದೀಗ, ಇದೇ ಭಟ್ಟರು ಮತ್ತೊಂದು ಹೊಸ ಹಾಡಿನ ಮೂಲಕ ಆಗಮಿಸಿದ್ದಾರೆ. ಕುಲದಲ್ಲಿ ಕೀಳ್ಯಾವುದೋ ಚಿತ್ರಕ್ಕೆ ಕ್ಯಾಚಿ ಲಿರಿಕ್ಸ್‌ವುಳ್ಳ ಹಾಡನ್ನು ಬರೆದಿದ್ದಾರೆ.

ಪ್ರಸ್ತುತ ಯೋಗರಾಜ್ ಭಟ್ ಅವರು "ಕಾಮಿಡಿ ಕಿಲಾಡಿಗಳು" ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ ಕುಲದಲ್ಲಿ ಕೀಳ್ಯಾವುದೊ ಚಿತ್ರಕ್ಕೆ "ನಮ್ ಪೈಕಿ ಒಬ್ಬ ಹೋಗ್ಬುಟ.." ಎಂಬ ಹಾಡನ್ನು ಬರೆದಿದ್ದಾರೆ. ಮನೋಮೂರ್ತಿ ಅವರು ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕ ಆಂಥೋನಿ ದಾಸ್ ಅವರ ಕಂಠಸಿರಿಯಲ್ಲಿ‌ ಈ ಹಾಡು ಮೂಡಿಬಂದಿದೆ. ಇತ್ತೀಚೆಗೆ ಈ ಹಾಡು ಬಿಡುಗಡೆ ಸಮಾರಂಭ ನಡೆಯಿತು. ನಾಯಕ ನಟ ಮನು ಬ್ಯಾಂಡ್ ಬಾರಿಸಿಕೊಂಡು ಬ್ಯಾಂಡ್ ಸೆಟ್ ಅವರ ಹಾಗೂ ಅರ್ಕೆಸ್...